ಶುಕ್ರವಾರ, ಸೆಪ್ಟೆಂಬರ್ 6, 2013

ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ

ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ
ಕವಿ ಕಾಣದಾ ಶೃಂಗಾರದಾ ರಸ ಕಾವ್ಯ ಇಲ್ಲಿದೆ.

ನವ ಯೌವ್ವನ ಹೊಂಗನಸಿನ ಮಳೆ ಬಿಲ್ಲು ತಂದಿದೆ
ನಸು ನಾಚುತೆ ಹೊಸ ಪ್ರೇಮದ ಕುಡಿಯಿಲ್ಲಿ ಚಿಗುರಿದೆ
ನೂರಾಸೆಯ ನೆಲೆಯಾಗಿದೆ
ಮಧುಚಂದ್ರದ ಮಧುಮೈತ್ರಿಯ ನಿರೀಕ್ಷೆ ಅಲ್ಲಿದೆ
ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ
ಕವಿ ಕಾಣದಾ ಶೃಂಗಾರದ ರಸ ಕಾವ್ಯ ಇಲ್ಲಿದೆ

ಪ್ರತಿಪ್ರೇಮಿಯ ಬಾಳಲ್ಲಿಯು ಶುಭ ರಾತ್ರಿ ಒಂದಿದೆ
ಅನುರಾಗದ ಆ ವೇಳೆಗೆ ಮನ ಕಾದು ನಿಂತಿದೆ
ಸರಿಜೋಡಿಯ ಕಣ್ಣರಸಿದೆ
ಇನಿ ಜೋಡಿಯು ಸವಿನೆನಪಲಿ ಜಗವನ್ನೆ ಮರೆತಿದೆ
ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ
ಕವಿ ಕಾಣದ ಶೃಂಗಾರದ ರಸ ಕಾವ್ಯ ಇಲ್ಲಿದೆ

ಚಿತ್ರ: ದಾರಿ ತಪ್ಪಿದ ಮಗ
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯನ: ಪಿ. ಬಿ. ಶ್ರೀನಿವಾಸ್


Tag: Kannanchina ee maatali eneno tumbide

ಕಾಮೆಂಟ್‌ಗಳಿಲ್ಲ: