ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮುತ್ತಿನ ಹನಿಗಳೂ ಸುತ್ತಲೂ ಮುತ್ತಲೂ

ಮುತ್ತಿನ ಹನಿಗಳೂ ಸುತ್ತಲೂ ಮುತ್ತಲೂ
ಮನವು ಅರಳಿ ಹೊಸತನ ತರುತಿದೆ
ನನ್ನಲ್ಲಿ ನಿನ್ನಲ್ಲಿ , ಹೋ
ನನ್ನಲ್ಲೀ ನಿನ್ನಲ್ಲೀ

ಮುಗಿಲಿನಾ ಆಟಕೇ ಮಿಂಚಿನಾ ಓಟಕೇ
ಗಗನ ಹೆದರಿ ನಡುಗಿದೆ ಗುಡುಗಿದೆ
ನಿನ್ನಂತೆ ನನ್ನಂತೇ, ಹೋ
ನಿನ್ನಂತೇ ನನ್ನಂತೇ
ಮುತ್ತಿನಾ ಹನಿಗಳೂ

ಗಾಳಿಯೂ ಬೀಸಿದೇ ಕಿವಿಯಲೀ ಹಾಡಿದೇ
ಈ ಹೆಣ್ಣು ಚೆನ್ನಾ ಗುಣದಲ್ಲಿ ಚಿನ್ನ
ಬಿಡಬೇಡವೆಂದಿದೇ
ಮಾತಿಗೇ ಸೋಲದೇ ಆತುರಾ ತೋರದೇ
ನಿನ್ನಿಂದ ಇನ್ನು ದೂರಾಗು ಎಂದು
ಬಿರುಗಾಳಿ ನೂಕಿದೇ
ಬಿರುಗಾಳಿ ನೂಕಿದೇ
ಮುಗಿಲಿನ ಆಟಕೆ

ನೋಟದಾ ಮಿಂಚಿಗೇ ಮಾತಿನಾ ಗುಡುಗಿಗೇ
ನಾನಂದು ಹೆದರಿ ಮೈಯೆಲ್ಲ ಬೆವರಿ ಊರಾಚೆ ಓಡಿದೇ
ಹೆಣ್ಣಿಗೇ ಹೆದರುವಾ ಗಂಡಿನಾ ಶೌರ್ಯವಾ
ನಾನಂದು ಕಂಡೆ ಹುಡುಗಾಟಕೆಂದೆ ದಿನವೆಲ್ಲ ಕಾಡಿದೇ
ದಿನವೆಲ್ಲ ಕಾಡಿದೇ
ಮುತ್ತಿನಾ ಹನಿಗಳೂ

\ಚಿತ್ರ: ಬಯಸದೇ ಬಂದ ಭಾಗ್ಯ
ಸಾಹಿತ್ಯ: ಚಿ. ಉದಯಶಂಕರ
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಮ್ ಮತ್ತು ಎಸ್. ಜಾನಕಿ


ಇಲ್ಲಿ ಕೇಳಿ

Tag: Muttina hanigalu suttalu muttalu



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ