ಶುಕ್ರವಾರ, ಸೆಪ್ಟೆಂಬರ್ 6, 2013

ಓ ದ್ಯಾವ್ರೇ

ಓ ದ್ಯಾವ್ರೇ, ಓ ದ್ಯಾವ್ರೇ
ನಿನ್ನ ಅಂದ ಚೆಂದವೇನೋ 
ಎಂದೂ ನಾ ಕಾಣೆ
ನಿನ್ನಲೇನೋ ಹಿಗ್ಗಿ ಹಿಗ್ಗಿ
ಕುಣಿವೆ ನಿನ್ನಾಣೆ

ಏ ವೂವೇ (ಹೂವೇ) ನಿನ್ನ ಚೆಲುವ
ನಾ ಕಂಡೇ ಇಲ್ಲ
ಚೆಲುವು ಅಂದ ರೂಪವೇನೋ
ನಂಗೇ ಗೊತ್ತೇ ಇಲ್ಲ
ನಿನ್ನ ಘಮ ಘಮ ನನ್ನ ಮನವ
ತುಂಬೈತಲ್ಲ, ತುಂಬೈತಲ್ಲ
ಓ ದ್ಯಾವ್ರೇ, ಓ ದ್ಯಾವ್ರೇ
ನಿನ್ನ ಅಂದ ಚೆಂದವೇನೋ 
ಎಂದೂ ನಾ ಕಾಣೆ

ಓ ವೊಳೆಯೇ (ಹೊಳೆಯೇ) ನಿನ್ನ ಓಟ
ನಾ ನೋಡಲಾರೆ
ಓ ಅಲೆಯೇ ನಿನ್ನ ಆಟ
ನಾ ಕಾಣಲಾರೆ
ನಿನ್ನ ಸಂಗ ಆಡುವಾಗ
ನನ್ನ ನಾ ಮರೆವೆ, ನನ್ನ ನಾ ಮರೆವೆ
ಓ ದ್ಯಾವ್ರೇ, ಓ ದ್ಯಾವ್ರೇ
ನಿನ್ನ ಅಂದ ಚೆಂದವೇನೋ 
ಎಂದೂ ನಾ ಕಾಣೆ

ಓ ಮುಗಿಲೇ ನಿನ್ನ ಬಣ್ಣ
ನಾನಿಂದು ಕಾಣೆ
ಏಳು ಬಣ್ಣ ಅಂತಾರೆ
ನಾನೊಂದೂ ಕಾಣೆ
ಸೋನೆಯಲ್ಲಿ ತೋಯುವಾಗ
ನನ್ನ ನಾ ಮರೆವೆ
ಓ ದ್ಯಾವ್ರೇ, ಓ ದ್ಯಾವ್ರೇ
ನಿನ್ನ ಅಂದ ಚೆಂದವೇನೋ 
ಎಂದೂ ನಾ ಕಾಣೆ
ನಿನ್ನಲೇನೋ ಹಿಗ್ಗಿ ಹಿಗ್ಗಿ
ಕುಣಿವೆ ನಿನ್ನಾಣೆ

ಸಾಹಿತ್ಯ:  ವಿಜಯನಾರಸಿಂಹ
ಸಂಗೀತ: ವಿಜಯಭಾಸ್ಕರ್
ಗಾಯನ: ಕಸ್ತೂರಿ ಶಂಕರ್
Tag: o dhyaavre ninna anda chandaveno endoo naa kaane
ಕಾಮೆಂಟ್‌ಗಳಿಲ್ಲ: