ಮಂಗಳವಾರ, ಅಕ್ಟೋಬರ್ 1, 2013

ಸ್ನೇಹ ಅತಿ ಮಧುರ


ಸ್ನೇಹ ಅತಿ ಮಧುರ, ಸ್ನೇಹ ಅದು ಅಮರ 
ಸ್ನೇಹವೇ ಗುಡಿಯು, ಪ್ರೀತಿಯೇ ದೇವರು 
ಕಾಲ ದೇಶ ಮೀರಿದ ಭಾವ 
ಸ್ನೇಹ ಅತಿ ಮಧುರ

ಸ್ನೇಹಕೆ ವಯಸಿನ ಅಂತರವಿಲ್ಲ, ಸಿರಿತನ ಬಡತನ ಸೀಮೆಗಳಿಲ್ಲ 
ಸ್ನೇಹಕೆ ಸ್ವಾರ್ಥದ ಆಸೆಗಳಿಲ್ಲ, ಸಮತೆ ಮಮತೆ ಸ್ನೇಹದ ಗಾನ 
ಸ್ನೇಹ ಅತಿ ಮಧುರ

ಓಡುವ ನದಿಗೆ ಮೋಡದ ಸ್ನೇಹ, ಅರುಳುವ ಹೂವಿಗೆ ಕಿರಣದ ಸ್ನೇಹ 
ಬಂಗಾರದ ಶಶಿಗೆ ಸಾಗರದ ಸ್ನೇಹ, ಒಲವು ನಲಿವು ಸ್ನೇಹದ ಚೆಲುವು 
ಸ್ನೇಹ ಅತಿ ಮಧುರ

ಲೋಕದ ಜೀವನ ಸ್ನೇಹದ ಬಂಧನ, ಪಾವನ ಪ್ರೇಮ ಸ್ನೇಹದ ಸ್ಪಂದನ 
ಸ್ನೇಹವ ಬಯಸದ ಜನರೆಲ್ಲಿಹರು, ಹಾಲು ಜೇನು ಸ್ನೇಹದ ಸಂಗಮ 
ಸ್ನೇಹ ಅತಿ ಮಧುರ, ಸ್ನೇಹ ಅದು ಅಮರ 

ಸ್ನೇಹವೇ ಗುಡಿಯು, ಪ್ರೀತಿಯೇ ದೇವರು 
ಕಾಲ ದೇಶ ಮೀರಿದ ಭಾವ 
ಸ್ನೇಹ ಅತಿ ಮಧುರ

ಸಾಹಿತ್ಯ: ನಾ. ಕೃ. ಸತ್ಯನಾರಾಯಣ

Tag: Sneha ati madhura, sneha adhu amara

ಕಾಮೆಂಟ್‌ಗಳಿಲ್ಲ: