ಸೋಮವಾರ, ಅಕ್ಟೋಬರ್ 14, 2013

ಹಬ್ಬ ಹಬ್ಬ

ಹಬ್ಬ ಹಬ್ಬ, ಹಬ್ಬ ಹಬ್ಬ, ಹಬ್ಬ ಹಬ್ಬ, ಹಬ್ಬ ಹಬ್ಬ
ಇದು ಕರುನಾಡ ಮನೆ ಮನೆ ಹಬ್ಬ

ಹಬ್ಬ ಹಬ್ಬ, ಹಬ್ಬ ಹಬ್ಬ, ಹಬ್ಬ
ಇದು ಚಾಮುಂಡಿ ತಾಯಿ ತವರ ಹಬ್ಬ
ವಿಜಯದ ಹಬ್ಬ ಆಯುಧ ಪೂಜ ಹಬ್ಬ
ಹಬ್ಬ ಇದು ಉಸಿರ ತನ್ನುಸಿರ ತೆತ್ತ ದಸರ ಹಬ್ಬ
ಹಬ್ಬ ಹಬ್ಬ
ಇದು ಮೈಸೂರ ಸೀಮೆ ರಾಜ ಹಬ್ಬ
ಹಬ್ಬ ಹಬ್ಬ
ಇದು ಕುಣಿದಾಡೊ ಮಕ್ಕಳ ಬೊಂಬೆ ಹಬ್ಬ
ಓ ವಿಜಯದ ಹಬ್ಬ ಅಯುಧ ಪೂಜ ಹಬ್ಬ
ಹಬ್ಬ ಇದು ಮನೆಗೆ, ಮನೆ ಮನೆಗೆ ಹೋಗಿ ಕರಿಯೋ ಹಬ್ಬ

ವಿದ್ಯೆಗೆಲ್ಲ ಮಹರಾಣಿ ವಾಣಿ ವರವೀಣಾಪಾಣಿ
ಹಸೆಮೇಲೆ ಹೂಮಾಲೆ ತೊಟ್ಟು ನಲಿಯೋ ಸಂಭ್ರಮ
ದುಷ್ಟ ದಮನೆ ಶ್ರೀ ದುರ್ಗ ಶಾಂತ ಮೂರ್ತಿ ತಾನಾಗಿ
ನಗುವಿನ ಒಡವೇನ ತೊಟ್ಟು ನಲಿಯೋ ಸಂಭ್ರಮ
ರಂಗೋಲಿ ಚಿತ್ತಾರ ಮತಾಪು ದೀಪ ವಿಹಾರ
ಓ ಬಳೆಗಳ ಹಬ್ಬ ಹೆಣ್ಣು ಮಕ್ಕಳ ಹಬ್ಬ
ಹಬ್ಬ ಇದು ಮನೆಗೆ, ಮನೆ ಮನೆಗೆ ಹೋಗಿ ಕರಿಯೋ ಹಬ್ಬ

ಹೊನ್ನಮಳೆಯ ಸುರಿಸಿದ ನಮ್ಮ ವಿಜಯನಗರದ
ವೈಭವ ನೆನೆಯುವ ಕನ್ನಡಿಗರ ಸಂಭ್ರಮ
ಕಲೆಗು ಖಡ್ಗಕ್ಕೂ ಮೈತ್ರಿ ತಂದು ಕೊಡೋ ನವರಾತ್ರಿ
ಇತಿಹಾಸ ಮರುವೇಷ ತೊಟ್ಟು ನಲಿಯೋ ಸಂಭ್ರಮ
ಕಠಾರಿ ಪೆಠಾರಿ ನಗಾರಿ ಜಂಬು ಸವಾರಿ
ಓ ಜನಗಳ ಹಬ್ಬ ಹತ್ತು ದಿನಗಳ ಹಬ್ಬ
ಹಬ್ಬ ಇದು ದಾನ ಅಭಿಯಾನ ನೀಡೊ ಹಬ್ಬಗಳ ಹಬ್ಬ

ಚಿತ್ರ: ಹಬ್ಬ
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ
ಹಾಡಿರುವವರು: ರಾಜೇಶ್, ನಂದಿತ ಮತ್ತು ರಮೇಶ್ ಚಂದ್ರTag: Habba habba

ಕಾಮೆಂಟ್‌ಗಳಿಲ್ಲ: