ಮಂತ್ರಾಲಯದೊಳು ರಾಜಿಪನಾರೆ
ಮಂತ್ರಾಲಯದೊಳು ರಾಜಿಪನಾರೆ
ಸಂತರ ಒಡೆಯನ ನೋಡುವ ಬಾರೇ
ಇಂದ್ರ ನೀಲಮಣಿ ಕಾಂತಿಯ ತೆರೆಯುವ
ಬೃಂದಾವನ ಸನ್ಮಂದಿರನ್ಯಾರೇ
ಎಂದಿಗು ಕುಂದದ ಮಹಿಮ ಮುನೀಂದ್ರನು
ವಂದಿತ ಶ್ರೀರಾಘವೇಂದ್ರಕಣಮ್ಮಾ
ಚಂದದಿ ಮಣಿಮಯ ಮಕುಟವ ಧರಿಸಿದ
ಸುಂದರ ಬಾಲಕ ಇವನ್ಯಾರೇ
ತಂದೆ ಅಸಿಯ ಹಿರಿದು ಕಮಲೇಶನ ತೋರೆನೆ
ಮುಕುಂದನ ತೋರಿದ ಬಾಲ ಪ್ರಹ್ಲಾದನೇ
ಸಾಹಿತ್ಯ: ಕಮಲೇಶ ವಿಠ್ಠಲರು
Tag: Mantralayadolu raajipanaare
ಕಾಮೆಂಟ್‌ಗಳು