ನಮ್ಮಂತೆಯೇ!
ಟಾಗೂರರ ಪದ್ಯವೊಂದರಲ್ಲಿ,
ಸಿಕ್ಕಿಬಿದ್ದ ಕಳ್ಳನೊಬ್ಬನನ್ನು ನೋಡಿದ
ಒಬ್ಬ ಬಾಲಕ ಉದ್ಗರಿಸುತ್ತಾನೆ:
“ಕಳ್ಳನೆಂದರೆ ನಾನು ಏನೋ
ಅಂದುಕೊಂಡಿದ್ದೆ;
ಅಯ್ಯೋ,
ನಮ್ಮಂತೆಯೇ ಇದ್ದಾನಲ್ಲ!”
ನನ್ನ ಬಾಲ್ಯದಲ್ಲಿ ನಮ್ಮಜ್ಜಿ ಹೇಳಿದ
ಒಂದು ಸಂಗತಿ:
“ಒಮ್ಮೆ ಚಾಮುಂಡಿ ಬೆಟ್ಟಕ್ಕೆ
ಹೋಗಿದ್ದೆವು”
ಮಹಾರಾಣಿಯೂ ಅಲ್ಲಿಗೆ ಕಾರಿನಲ್ಲಿ
ಬಂದಳು.
ಒಂದು ಕ್ಷಣ ಪರದೆ ಸರಿಸಿ ನಮ್ಮತ್ತ
ನೋಡಿದಳು;
ರಾಣಿ ಎಂದರೆ ಏನೋ ಅಂದುಕೊಂಡಿದ್ದೆವು;
ಅಯ್ಯೋ! ನಮ್ಮಂತೆಯೇ ಇದ್ದಳು!”
ಈಚೆಗೆ ಲೈಂಗಿಕ ಕಾರ್ಯಕರ್ತೆಯರ
ಮೆರವಣಿಗೆಯೊಂದನ್ನು ನೋಡಿದೆ.
ಲೈಂಗಿಕ ಕಾರ್ಮಿಕರೆಂದರೆ
ಏನೋ ಅಂದುಕೊಂಡಿದ್ದೆ;
ಅಯ್ಯೋ,
ನಮ್ಮ ಅಕ್ಕ ತಂಗಿಯರಂತೆಯೆ,
ಹೆಣ್ಣು ಮಕ್ಕಳಂತೆಯೇ ಇದ್ದಾರಲ್ಲ!
ಒದ್ದೆಯಾದದ್ದೇಕೆ ನನ್ನ ಕಣ್ಣು?
ಸಾಹಿತ್ಯ: ಸಿ.ಪಿ.ಕೆ (ಸಿ. ಪಿ. ಕೃಷ್ಣಕುಮಾರ್)
Tag: Nammanteye
ಕಾಮೆಂಟ್‌ಗಳು