ಸೋಮವಾರ, ಅಕ್ಟೋಬರ್ 21, 2013

ಪರಚಿಂತೆ ನಮಗೆ ಏಕೆ


ಪರಚಿಂತೆ ನಮಗೆ ಏಕೆ ಅಯ್ಯಾ
ಎಮ್ಮಯ ಚಿಂತೆ ಎಮಗೆ ಸಾಲದೇ ||
ಕೂಡಲಸಂಗನು ಒಲಿವನೊ ಒಲಿಯನೊ
ಎಂಬ ಚಿಂತೆ ಹಾಸಲುಂಟು ಹೊದೆಯಲುಂಟು ||

ಎನಗಿಂತ ಕಿರಿಯರಿಲ್ಲಯ್ಯಾ
ಶಿವಭಕ್ತರಿಗಿಂತ ಹಿರಿಯರಿಲ್ಲಯ್ಯಾ
ನಿಮ್ಮ ಪಾದಸಾಕ್ಷಿ ಎನಗೆ ಎನ್ನ ಮನದ ಸಾಕ್ಷಿಯಯ್ಯಾ
ಕೂಡಲಸಂಗಮದೇವಾ ಎನಗಿದೇ ದಿವ್ಯ ||

ಮೃದುವಚನವೇ ಸಕಲ ಜಪಂಗಳಯ್ಯ
ಮೃದುವಚನವೇ ಸಕಲ ತಪಂಗಳಯ್ಯ ||
ಸದುವಿನಯವೇ ಸದಾಶಿವನೊಲುಮೆಯಯ್ಯ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯ ||


ಕಾಮೆಂಟ್‌ಗಳಿಲ್ಲ: