ಮಂಗಳವಾರ, ಅಕ್ಟೋಬರ್ 22, 2013

ಜಗನ್ಮಾತೆಯ ಆಶೀರ್ವಾದದ


ಜಗನ್ಮಾತೆಯ ಆಶೀರ್ವಾದದ

ಬಾನಕ್ಷತೆ ಈ ಬೆಳ್ಳಕ್ಕಿ;
ಮನೆಯಿದಿರೇ ಹೊಲದಲಿ
ಎರಚಿದವೋಲಿದೆ ಬಿಳಿಅಕ್ಕಿ!
ಒಯ್ಯೊಯ್ಯನೆ ಅಃ ಚಲಿಸುತ್ತಿವೆ
ಸಾಲ್‌ ಸಾಲ್‌ ಸಾಲ್‌ ಹಾಲ್‌ಚುಕ್ಕಿ!


ಮಣ್‌ಬದುಕಿನ ಹುಳುಬಾಳಿಗೆ

ಸಂಕಟವನು ತಂದಿಕ್ಕಿ
ಹೊಟ್ಟೆಯ ಪಾಡಿಗೆ ದುಡಿಯುವ
ದಾವಣಿಯಲಿ ಸಿಕ್ಕಿ
ಚಲಿಸುತ್ತಿವೆ ದಿಟ ನಿನಗಾ
ಸಂಕುಲಪಂಕ್ತಿಯ ಬಕಪಕ್ಷಿ:
ನನಗಾದರೊ ಅವು ಬೇರೊಂದನುಭೂತಿಗೆ
ಸಂಕೇತದ ಸಾಕ್ಷಿ!ಸಾಹಿತ್ಯ: ಕುವೆಂಪು

ಕಾಮೆಂಟ್‌ಗಳಿಲ್ಲ: