ಮಂಗಳವಾರ, ಅಕ್ಟೋಬರ್ 29, 2013

ಗಗನವು ಎಲ್ಲೋ ಭೂಮಿಯು ಎಲ್ಲೋ

ಗಗನವು ಎಲ್ಲೋ ಭೂಮಿಯು ಎಲ್ಲೋ
ಒಂದೂ ಅರಿಯೇ ನಾ
ಎನಗೆ ನೀ ನೀಡಿದ ವಚನವ ಕೇಳಿ
ತೇಲಿ ತೇಲಿ ಹೋದೆನಾ

ನೂತನ ಜಗದ ಬಾಗಿಲು ತೆರೆಯಿತು
ಮನವನು ಕವಿದ ತೆರೆಯು ಸರಿಯಿತು
ಕಂಗಳು ಒಲವಿನ ಕಥೆಯ ಬರೆಯಿತು
ಕಾಲ್ಗಳು ಹರುಷದಿ ಕುಣಿ ಕುಣಿದಾಡಿತು

ಪ್ರೇಮವಸಂತದ ರಾಗವು ಮಿಡಿಯಿತು
ಆಶಾಗಾನದ ಪಲ್ಲವಿ ಹಾಡಿತು
ನವಜೀವನದ ಜ್ಯೋತಿಯು ಬೆಳಗಿತು
ಉಲ್ಲಾಸದಿ ಮನ ನಲಿ ನಲಿದಾಡಿತು

ಚಿತ್ರ: ಗೆಜ್ಜೆಪೂಜೆ
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ವಿಜಯಭಾಸ್ಕರ್
ಗಾಯನ: ಎಸ್. ಜಾನಕಿTag: Gaganavu Ello, Bhumiyu ello

ಕಾಮೆಂಟ್‌ಗಳಿಲ್ಲ: