ಮಂಗಳವಾರ, ಅಕ್ಟೋಬರ್ 22, 2013

ನಮ್ಮ ಸಂಸಾರ ಆನಂದಸಾಗರ

ನಮ್ಮ ಸಂಸಾರ, ಆನಂದ ಸಾಗರ
ಪ್ರೀತಿಯೆಂಬ ದೈವವೇ ನಮಗಾಧಾರ
ಆ ದೈವ ತಂದ ವರದಿಂದ ಬಾಳೇ ಬಂಗಾರ

ಜೇನುಗೂಡಿನಂತೇ ನಮ್ಮೀ ಮನೆಯು
ಕೂಡಿ ಬಾಳುತಿರುವಾ ದೇವರ ಗುಡಿಯು
ತಾಯಮಮತೆ ಎಂಬುದೇ ನಮಗೆ ರಕ್ಷೆಯು
ಹಿರಿಯರ ನುಡಿ ರತ್ನವೇ ಬಾಳಿನ ಬೆಳಕು, 
ಬಾಳಿನಾ ಬೆಳಕು

ಸೋದರ ವಾತ್ಸಲ್ಯದೀ ಲಕ್ಷ್ಮಣನನ್ನು
ಮೀರಿಸೊ ಗುಣವಂತನೂ ನನ್ನೀ ತಮ್ಮನು
ಕಷ್ಟ ಸುಖದಿ ಆಣ್ಣನಿಗೆ ನೆರವಾಗುವೆನು
ಬಾಳರಥವ ಸಾಗಿಸಲೂ ಜೊತೆಗೇ ದುಡಿವೆನು, 
ಜೊತೆಗೇ ದುಡಿವೆನು


ಚಿತ್ರ: ನಮ್ಮ ಸಂಸಾರ
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ಎಂ. ರಂಗರಾವ್

ಗಾಯನ: ಪಿ. ಬಿ. ಶ್ರೀನಿವಾಸ್, ಪಿ. ಸುಶೀಲ ಮತ್ತು ಎಸ್. ಪಿ. ಬಾಲಸುಬ್ರಹ್ಮಣ್ಯಂ
ರಚನೆ: ಚಿ. ಉದಯಶಂಕರ್

ಕಾಮೆಂಟ್‌ಗಳಿಲ್ಲ: