ಗುರುವಾರ, ನವೆಂಬರ್ 28, 2013

ಮುಕ್ಕೋಟಿ ಕನ್ನಡಿಗರ ಒಡೆಯ ಅಮರರು

ಮುಕ್ಕೋಟಿ ಕನ್ನಡಿಗರ ಒಡೆಯ ಅಮರರು

                      ಮು....ಮುಕ್ಷಗಳ ಹೃದಯದಲಿ ಅಚ್ಚಳಿಯದೇ ಉಳಿದು, ಮು
                      ಕ್ಕೋ....ಟಿಗೂ ಮೀರಿದ ಕನ್ನಡಿಗರ ತಂದೆಯಾಗಿ, ಐದು ದಶಕೋ
                      ಟಿ....ಭಾರತೀಯರ ಗೌರವನಿಷ್ಠೆಗಳ ದಾತನಾಗಿ ಐತಿಹಾಸಿ
                      ....ಜೀವನ ನಡೆಸಿ, ಆಧ್ಯಾತ್ಮಿಕ, ಸಾಮಾಜಿಕ, ಧಾರ್ಮಿಕವೆ
                      ನ್ನ....ದೆ ಸರ್ವರನೂ ಅರಿತ ಸರ್ವಜ್ಞನಾಗಿ ಇಡೀ ವಿಶ್ವವೇ ನಿನ್ನ
                      ಡಿ....ದಾವರೆಗಳಿಗೆರಗುವಂಥ ಎಲ್ಲಾ ಪ್ರಾಕಾರಗಳ ಉದ್ಗ್ರಂಥಗಳನು
                      ....oಡು ಶೈಲಿಯ ಕನ್ನಡ, ಆಂಗ್ಲ, ಸಂಸ್ಕ್ರತಗಳ, ಲಿಪಿಗಳಲಿ ರಚಿಸಿದ್ದು
                      ....ಸಋಷಿಗಳಿಗೂ ಮೀರಿದ ತೇಜಭಾಸ್ಕರನು ನೀನು||
                      ....ಡೆಯ ಎಂಬೀ ಶಬ್ದ ಬರೀ ಮಾತಲ್ಲ, ಕವಿಗಳಿಗೆ ಕಲಾವಿದರಿಗೊ
                      ಡೆ....ಯನಾಗಿ, ಶಿಲ್ಪಿಗಳಿಗೆ, ಸಂಗೀತಸಾರ್ವಭೌಮರಿಗೊಡೆ
                      ....ನಾಗಿ, ಶರಣರಿಗೆ, ದಾಸರಿಗೆ, ಧಾನಧರ್ಮಗಳಿಗೊಡೆಯನು ನೀನು||
                      ....ಕಟಕಟಾ! ‘ಮಹಾರಾಜ ಪ್ರತ್ಯಕ್ಷದೈವ’ ಇಂತಿದ್ದೂ ಮರಣವೇ?
                      ....ನುಜಸೃಷ್ಟಿಗೆ ಅಲ್ಲ!  ಅಣುರೇಣುತೃಣಕಾಷ್ಠಗಳಿಗೂ ಇದು ವಿಧಿಲಿಖಿತ
                      ....ಕ್ಕಸಮರ್ಧಿನಿ ಶ್ರೀ ಚಾಮುಂಡೀ ತಾಯೆ!  ರಕ್ಷಿಸು ನೀ ಧರಣಿ ಮಂಡಲವನ್ನು
                      ರು...ದ್ರನಾ ಕರೆಗೆ ಮನವೊಲಿದು ಮರೆಯಾದ ನಮ್ಮ ಪ್ರಭು ಅಮರ, ‘ಅಜರಾಮರ.’

ಸಾಹಿತ್ಯ: ನ. ನಾಗಲಿಂಗಸ್ವಾಮಿ
ಈ ಕವನದ ಪ್ರತಿ ಸಾಲಿನ ಮೊದಲನೆಯ ಅಕ್ಷರರಗಳನ್ನೆಲ್ಲ ಮೇಲಿನಿಂದ ಕೆಳಗಿನವರೆಗೆ ಒಟ್ಟಾಗಿ ಸೇರಿಸಿದರೆ ‘ಮುಕ್ಕೋಟಿ ಕನ್ನಡಿಗರ ಒಡೆಯ ಅಮರರು’ ಎಂದಾಗುತ್ತದೆ.ಕಾಮೆಂಟ್‌ಗಳಿಲ್ಲ: