ಬುಧವಾರ, ಡಿಸೆಂಬರ್ 25, 2013

ಸೇವಂತಿಗೆ ಚೆಂಡಿನಂತ ಮುದ್ದುಕೋಳಿ

ಸೇವಂತಿಗೆ ಚೆಂಡಿನಂತ ಮುದ್ದುಕೋಳಿ
ತಾಯಿ ಮಡಿಲಿನಲಿ ಬೀಡುಬಿಟ್ಟ ಮುದ್ದುಕೋಳಿ


ಅಮ್ಮನಿತ್ತದೆ ಅಮೃತ ಎನುವ ಮುದ್ದುಕೋಳಿ
ಒಳ್ಳೆ ನಲ್ಮೆಯಿಂದ ಬೆಳೆದು ಬಂದ ಮುದ್ದುಕೋಳಿ
ಸೇವಂತಿಗೆ ಚಂಡಿನಂತ ಮುದ್ದುಕೋಳಿ
ತಾಯಿ ಮಡಿಲಿನಲಿ ಬೀಡುಬಿಟ್ಟ ಮುದ್ದುಕೋಳಿತಾಯಿ ತೊರೆದು ಗಳಿಗೆ ಕೂಡ ಅಗಲಲಾರದು
ತನ್ನ ಸೋದರರ ಮರೆತುಬಿಟ್ಟು ಮೆರೆಯಲಾರದು
ಜಾಣಮರಿ ಮುದ್ದುಕೋಳಿ ಮಾತನಾಡದು
ತನ್ನ ಸಾಕಿದವರ ಬಿಟ್ಟುದೂರ ಓಡಿಹೋಗದು
ಸೇವಂತಿಗೆ ಚಂಡಿನಂತ ಮುದ್ದುಕೋಳಿ
ತಾಯಿ ಮಡಿಲಿನಲಿ ಬೀಡುಬಿಟ್ಟ ಮುದ್ದುಕೋಳಿಪ್ರೇಮವಿರುವ ಮನೆಯದುವೆ ನಿತ್ಯಸುಂದರ
ಆ ಪ್ರೇಮಭರಿತ ಹೃದಯವದು ದೇವಮಂದಿರ
ದೇವನವನೆ ಪ್ರೇಮರೂಪ ದಯಾಸಾಗರ
ಆ ಪ್ರೆಮರಕ್ಷೆ ಕಾವುದೆಲ್ಲ ಪ್ರೇಮಜೀವರ
ಸೇವಂತಿಗೆ ಚಂಡಿನಂತ ಮುದ್ದುಕೋಳಿ
ತಾಯಿ ಮಡಿಲಿನಲಿ ಬೀಡುಬಿಟ್ಟ ಮುದ್ದುಕೋಳಿಚಿತ್ರ: ಚಿನ್ನದ ಗೊಂಬೆ
ರಚನೆ: ವಿಜಯನಾರಸಿಂಹ
ಸಂಗೀತ: ಟಿ. ಜಿ. ಲಿಂಗಪ್ಪ
ಗಾಯನ: ಸೂಲಮಂಗಲಂ ರಾಜಲಕ್ಷ್ಮಿ


Tag: Sevantige Chendinantha Muddukoli

ಕಾಮೆಂಟ್‌ಗಳಿಲ್ಲ: