ಮಂಗಳವಾರ, ಡಿಸೆಂಬರ್ 31, 2013

ಜಾಕೆಸ್ ಕಾಲಿಸ್

ಮಹಾನ್ ಟೆಸ್ಟ್ ಕ್ರಿಕೆಟ್ ತಾರೆಯ ನಿರ್ಗಮನ

ತಾನಾಡಿದ ಕಡೆಯ ಟೆಸ್ಟ್ ಪಂದ್ಯದಲ್ಲೂ ಶತಕ ಗಳಿಸಿ ತನ್ನ ತಂಡಕ್ಕೆ ಗೆಲುವು ತಂದು ಕೊಟ್ಟ ದಕ್ಷಿಣ ಆಫ್ರಿಕಾದ ಜಾಕೆಸ್ ಕಾಲಿಸ್ ಕ್ರಿಕೆಟ್ ಲೋಕ ಕಂಡ ಮಹಾನ್ ಆಟಗಾರ.  ಶತಕಗಳಿಕೆಯಲ್ಲಿ ವಿಶ್ವದಲ್ಲಿ ಎರಡವನೆಯರಾಗಿ, ಅತ್ಯಧಿಕ ರನ್ ಗಳಿಕೆಯಲ್ಲಿ ಮೂರನೆಯವರಾಗಿ, ಜೊತೆಗೆ ಮಹಾನ್ ಆಲ್ ರೌಂಡರ್ ಆಗಿ ಅವರು ಟೆಸ್ಟ್  ಕ್ರಿಕೆಟ್ ಲೋಕಕ್ಕೆ ನೀಡಿರುವ ಕೊಡುಗೆ ಅಪ್ರತಿಮವಾದದ್ದು.  ಟೆಸ್ಟ್ ಕ್ರಿಕೆಟ್ಟಿಗೆ ವಿದಾಯ ಹೇಳಿರುವ ಜಾಕೆಸ್ ಕಾಲಿಸ್ ಅವರ ನಿರ್ಗಮನದಿಂದ ನಮ್ಮ ಕಾಲದ ಬಹುತೇಕ ಶ್ರೇಷ್ಠ ಕ್ರಿಕೆಟ್ಟಿಗರೆಲ್ಲ ನಿರ್ಗಮಿಸಿದಂತಾಗಿದೆ.  ಮುಂದಿನ ಕಾಲ ಯುವ ಪೀಳಿಗೆಯದು.

Tag: Jaques Kallis

ಕಾಮೆಂಟ್‌ಗಳಿಲ್ಲ: