ಬುಧವಾರ, ಜನವರಿ 22, 2014

ಅನನ್ಯಾ ಕಾಸರವಳ್ಳಿ ಚಿತ್ರಕ್ಕೆ ಪ್ರಶಸ್ತಿ

ಅನನ್ಯಾ ಕಾಸರವಳ್ಳಿ ಚಿತ್ರಕ್ಕೆ ಪ್ರಶಸ್ತಿ

ಅನನ್ಯಾ ಕಾಸರವಳ್ಳಿ ನಿರ್ದೇಶನದ ‘ಕಪ್ಪು ಕಲ್ಲಿನ ಸೈತಾನ’ ಕಿರುಚಿತ್ರವು ಪುಣೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಕಿರುಚಿತ್ರ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿದೆ.  ಈ ಚಿತ್ರವು ಬೊಳುವಾರು ಮಹಮದ್ ಕುಂಞ್ ಅವರ ಕಥೆಯನ್ನಾಧರಿಸಿದೆ.  ಈ ಚಲನಚಿತ್ರೋತ್ಸವದಲ್ಲಿನ ಕಿರುಚಿತ್ರ ವಿಭಾಗದಲ್ಲಿ  ಫ್ರಾನ್ಸ್, ಫಿನ್ಲ್ಯಾಂಡ್, ಬ್ರಿಟನ್, ಸ್ಪೇನ್, ರಷ್ಯಾ ಮುಂತಾದ ವಿವಿಧ ದೇಶಗಳ ಚಿತ್ರಗಳು ಸ್ಪರ್ಧಾ ಕಣದಲ್ಲಿದ್ದವು. 


ಗಿರೀಶ್ ಕಾಸರವಳ್ಳಿ – ದಿವಂಗತ ವೈಶಾಲಿ ಕಾಸರವಳ್ಳಿ ದಂಪತಿಗಳ ಪುತ್ರಿಯಾದ ಅನನ್ಯಾ ಅವರು ಚೆನ್ನೈನ ಎಲ್ ವಿ ಪ್ರಸಾದ್ ಫಿಲಂ ಅಂಡ್ ಟೆಲಿವಿಷನ್ ಅಕಾಡೆಮಿಯಲ್ಲಿ ನಿರ್ದೇಶನವನ್ನು ಅಧ್ಯಯನ ಮಾಡಿದವರಾಗಿದ್ದು ಇದುವರೆವಿಗೂ ನಾಲ್ಕು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ.  ಅವರ ‘ಕಪ್ಪು ಕಲ್ಲಿನ ಸೈತಾನ’ ಕಿರುಚಿತ್ರವು ಇದೀಗ ಈ  ಪ್ರಶಸ್ತಿಯನ್ನು ಗಳಿಸಿರುವುದರ ಜೊತೆಗೆ ಮುಂಬರುವ ಮುಂಬೈ, ಸಿಲಿಗುರಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೂ ಆಯ್ಕೆಗೊಂಡಿದೆ.

ಅನನ್ಯಾ ಅವರ ಈ ಅನನ್ಯ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸೋಣ. 

Tag: Ananya Kasaravalli


ಕಾಮೆಂಟ್‌ಗಳಿಲ್ಲ: