ಬುಧವಾರ, ಫೆಬ್ರವರಿ 5, 2014

ಒಲುಮೇ ಪೂಜೆಗೆಂದೇ ಕರೆಯಾ ಕೇಳಿ ಬಂದೆ

ಒಲುಮೇ ಪೂಜೆಗೆಂದೇ ಕರೆಯಾ ಕೇಳಿ ಬಂದೆ
ರಾಗತಾನ ಪ್ರೇಮಗಾನ ಸಂಜೀವನ

ಮಮತೆ ಮೀಟಿ ಮಿಲನ ಕಂಡೇ
ನಿನ್ನ ಸ್ನೇಹ ಸೌಭಾಗ್ಯ ಮಿಂದೇ
ಹರೆಯ ತೂಗಿ ಸನಿಹ ಬಂದೇ
ಎಲ್ಲಾ ಪ್ರೀತಿ ಸನ್ಮೋಹ ತಂದೇ
ಹರುಷ ತಂದ ಹಾದಿಯೆ ಚಂದ
ಒಲವಿನಾಸರೆ ರೋಮಾಂಚಬಂಧ
ಒಲುಮೇ ಪೂಜೆಗೆಂದೇ ಕರೆಯಾ ಕೇಳಿ ಬಂದೆ
ರಾಗತಾನ ಪ್ರೇಮಗಾನ ಸಂಜೀವನ

ಜೊತೆಯ ಸೇರಿ ಬರುವೆ ನಾನು
ನನ್ನ ಬಾಳ ಬಂಗಾರ ನೀನು

ಬೆಳಕು ನೀನು ಕಿರಣಾ ನಾನು
ನಿನ್ನ ಕೂಡಿ ಹೊಂಬಿಸಿಲ ಭಾನು
ನಿನಗೇ ನಾನು ನನಗೇ ನೀನು
ನಿನಗೇ ನಾನು ನನಗೇ ನೀನು
ಪ್ರೇಮ ಜೀವನ ಎಂದೆಂದು ಜೇನು
ಒಲುಮೇ ಪೂಜೆಗೆಂದೇ ಕರೆಯಾ ಕೇಳಿ ಬಂದೆ

ರಾಗತಾನ ಪ್ರೇಮಗಾನ ಸಂಜೀವನ



ಚಿತ್ರ: ಅನುಪಮ

ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ಅಶ್ವಥ್ ಮತ್ತು ವೈದಿ
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್.ಜಾನಕಿ


Tag: Olume Pujegende kareya keli bande



ಕಾಮೆಂಟ್‌ಗಳಿಲ್ಲ: