ಯಾದವ ನೀ ಬಾ ಯದುಕುಲನಂದನ
ಯಾದವ
ನೀ ಬಾ ಯದುಕುಲನಂದನ
ಮಾಧವ ಮಧುಸೂದನ ಬಾರೋ
ಸೋದರ ಮಾವನ ಮಥುರೇಲಿ
ಮಡುಹಿದ
ಯಶೋದೆಕಂದ ನೀ ಬಾರೋ
ಶಂಖಚಕ್ರಗಳು ಕರದಲಿ
ಹೊಳೆಯುತ
ಬಿಂಕದ ಗೋವಳ ನೀ ಬಾರೋ
ಅಕಳಂಕಮಹಿಮ ಆದಿನಾರಾಯಣ
ಬೇಕೆಂಬ
ಭಕುತರಿಗೊಲಿಬಾರೋ
ಕಣಕಾಲಂದುಗೆ
ಘಲುಘಲುರೆನುತಲಿ
ಝಣಝಣ ವೇಣುನಾದದಲಿ
ಚಿಣ್ಣಿಕೋಲು ಚೆಂಡು
ಬುಗುರಿಯನಾಡುತ
ಸಣ್ಣ ಸಣ್ಣ
ಗೋವಳರೊಡಗೂಡಿ
ಖಗವಾಹನನೇ ಬಗೆಬಗೆ
ರೂಪನೇ
ನಗೆಮೊಗದರಸನೇ ನೀ ಬಾರೋ
ಜಗದೊಳು ನಿನ್ನಯ
ಮಹಿಮೆಯ ಪೊಗಳುವೆ
ಪುರಂದರವಿಠ್ಠಲ ನೀ
ಬಾರೋ
ಸಾಹಿತ್ಯ:
ಪುರಂದರದಾಸರು
Tag: Yadava Nee Baa
ಕಾಮೆಂಟ್‌ಗಳು