ಶನಿವಾರ, ಮಾರ್ಚ್ 8, 2014

ನನ್ನವಳು ನನ್ನೆದೆಯ ಹೊನ್ನಾಡನಾಳುವಳು

ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಡಗುಗೆನ್ನೆ ಚೆಲುವೆ ನನ್ನ ಹುಡುಗೀ
ಬೆಡಗುಗೆನ್ನೆ ಚೆಲುವೆ ನನ್ನ ಹುಡುಗಿ
ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಡಗುಗೆನ್ನೆ ಚೆಲುವೆ ನನ್ನ ಹುಡುಗಿ
ಬೆಳಗುಗೆನ್ನೆ ಚೆಲುವೆ ನನ್ನ ಹುಡುಗಿ
ಹೋ... ನನ್ನಾ ಹುಡುಗಿ

ಹೊಳೆಯ ಸುಳಿಗಳಿಗಿಂತಾ ಆಳಕಣ್ಣಿನ ಚೆಲುವು
ಹೊಳೆಯ ಸುಳಿಗಳಿಗಿಂತಾ ಆಳಕಣ್ಣಿನ ಚೆಲುವು
ಅವಳೊಮ್ಮೆ ಹೆರಳ ಕೆದರೀ
ಕಪ್ಪುಗುರುಳನು ಬೆನ್ನ ಮೇಲೆಲ್ಲ ಹರಡಿದರೆ,
ಹೋ.. ಕಪ್ಪುಗುರುಳನು ಬೆನ್ನ ಮೇಲೆಲ್ಲ ಹರಡಿದರೆ,
ದೂರದಲಿ, ಗಿರಿಯ ಮೇಲೇs....
ದೂರದಲಿ ಗಿರಿಯ ಮೇಲೇ ಇಳಿದಂತೆ ಇರುಳ ಮಾಲೆ,
ಇಳಿದಂತೇ ಇರುಳಾ ಮಾಲೇ,
ಇಳಿದಂತೇ ಇರುಳ ಮಾಲೆ...
ಇಳಿದಂತೆ ಇರುಳ ಮಾಲೆ

ತುಂಬು ಗರಿಗಳ ನಡುವೇ
ತುಂಬು ಚಂದಿರ ಬಂದು,
ಬೆಳ್ಳಿಹಸುಗಳ ಹಾಲ ಕರೆಯುವಂದು
ಅಂಗಳದ ನಡುವೇ
ಬೃಂದಾವನದ ಬಳಿ ನಿಂದೂ,
ಅಂಗಳದ ನಡುವೆ
ಬೃಂದಾವನದ ಬಳಿ ನಿಂದು,
ಹಾಡುವೆವು ಗಿರಿಯ ಕಂಡೂ
ಹಾಡುವೆವು ಗಿರಿಯ ಕಂಡು..
ಹಾಡುವೆವು ಗಿರಿಯ ಕಂಡು.

ತಾರೆಗಳ ಮೀಟುವೆವು
ಚಂದಿರನ ದಾಟುವೆವು
ಓ... ತಾರೆಗಳ ಮೀಟುವೆವು
ಚಂದಿರನ ದಾಟುವೆವು
ಒಲುಮೇಯೊಳಗೊಂದು ನಾವು
ಒಲುಮೇಯೊಳಗೊಂದು ನಾವೂ
ನಮಗಿಲ್ಲ ನೋವು ಸಾವು
ನಮಗಿಲ್ಲ ನೋವು ಸಾವೂ
ನಮಗಿಲ್ಲ ನೋವು ಸಾವು
ನಮಗಿಲ್ಲ ನೋವು ಸಾವು 

ಚಿತ್ರ: ಸರ್ವಮಂಗಳ

ಸಾಹಿತ್ಯ: ಕೆ. ಎಸ್. ನರಸಿಂಹ ಸ್ವಾಮಿ  
ಸಂಗೀತ: ಸತ್ಯಂ
ಗಾಯನ: ಪಿ. ಬಿ. ಶ್ರೀನಿವಾಸ್ ಮತ್ತು ಪಿ. ಸುಶೀಲ

Tag: Nannavalu Nannedeyaಕಾಮೆಂಟ್‌ಗಳಿಲ್ಲ: