ಶನಿವಾರ, ಮಾರ್ಚ್ 8, 2014

ಸ್ತ್ರೀ ಕುಲಕ್ಕೆ ನಮನ


ಸ್ತ್ರೀಕುಲಕ್ಕೆ ನಮನ

ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನಲಿಯುತ್ತಿರುತ್ತಾರೆ.

ಅಂತರರಾಷ್ಟ್ರೀಯ ಮಹಿಳಾ ದಿನವಾದ ಇಂದು ನಮ್ಮೀ ಬದುಕಿನಲ್ಲಿ ನಮ್ಮನ್ನು ಸಲಹಿರುವ, ಪಾಲಿಸಿರುವ, ಉದ್ಧರಿಸಿರುವ, ಕಲಿಸಿರುವ, ನಮಗಾಗಿ ದುಡಿದಿರುವ, ಪ್ರೀತಿ, ಪ್ರೇಮ, ಸ್ನೇಹಗಳನ್ನು ಉಣಿಸಿರುವ, ಬದುಕನ್ನು ಬೆಳಗಿರುವ ಎಲ್ಲಾ ಸ್ತ್ರೀಯರಿಗೂ ಗೌರವಪೂರ್ವಕ ನಮನಗಳು. ಈ ವಿಶ್ವ ಎಲ್ಲ ಬಗೆಯ ಸ್ತ್ರೀ ಶೋಷಣೆಗಳಿಂದ ಮುಕ್ತವಾಗಲಿ. ಸ್ತ್ರೀಯರು ನಿರ್ಭಯತೆಯಿಂದ, ಗೌರವದಿಂದ, ಯಾವುದಕ್ಕೂ ಕಡಿಮೆ ಇಲ್ಲದಂತೆ ಎಲ್ಲಾ ರಂಗಗಳಲ್ಲೂ ರಾರಾಜಿಸುವಂತಾಗಲಿ. ನಿಮ್ಮಿಂದ ನಮಗೆ ಬದುಕು ಸಿಕ್ಕಿದೆ,  ಬದುಕು ಹಸನಾಗಿದೆ,  ಸಹನೀಯವಾಗಿದೆ.  ನಿಮ್ಮೆಲ್ಲರಿಗೂ ಹೃದಯಪೂರ್ವಕವಾದ ಅನಂತಗೌರವಗಳು.


ಚಿತ್ರ ಕೃಪೆ: ಪ್ರಜಾವಾಣಿ

ಕಾಮೆಂಟ್‌ಗಳಿಲ್ಲ: