ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ
ಎಲ್ಲ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ
ಹಸುರಿದ್ದ ಗಿಡಮರ
ಬೆಳ್ಳಗಿದ್ದ ಹೂವೆಲ್ಲ
ನೆತ್ತರ ಕುಡೀದ್ಹಾಂಗೆ ಕೆಂಪಾದವು
ಹುಲ್ಲು
ಬಳ್ಳಿಗಳೆಲ್ಲ ಕೆಂಪಾದವೂ
ಊರು ಕಂದಮ್ಮಗಳು ಕೆಂಪಾದವೂ
ಜೊತೆಜೊತೆಗೆ
ನಡೆದಾಗ
ನೀಲ್ಯಾಗಿ ನಲಿದಂತ
ಕಾಯುತ್ತ ಕುಂತಾಗ
ಕಪ್ಪಾಗಿ ಕವಿದಂತ
ನುಡಿ ನುಡಿದು ಹೋದಾಗ
ಪಚ್ಚೆಯ ತೆನೆಯಂತ
ಭೂಮಿಯು ಎಲ್ಲಾನು ಕೆಂಪಾದವೂ
ನನಗಾಗ ಕೆಂಪಾದವೂ
ಜೊತೆಜೊತೆಗೆ
ನಡೆದಾಗ
ನೀಲ್ಯಾಗಿ ನಲಿದಂತ
ಕಾಯುತ್ತ ಕುಂತಾಗ
ಕಪ್ಪಾಗಿ ಕವಿದಂತ
ನುಡಿ ನುಡಿದು ಹೋದಾಗ
ಪಚ್ಚೆಯ ತೆನೆಯಂತ
ಭೂಮಿಯು ಎಲ್ಲಾನು ಕೆಂಪಾದವೂ
ನನಗಾಗ ಕೆಂಪಾದವೂ
ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ
ರಚನೆ: ಪಿ. ಲಂಕೇಶ್
ಸಂಗೀತ: ವಿಜಯಭಾಸ್ಕರ್
ಗಾಯನ: ಎಸ್ ಪಿ. ಬಾಲಸುಬ್ರಮಣ್ಯಂ
Tag: Kempadavo ella kempadavo
ಕಾಮೆಂಟ್‌ಗಳು