ಗುರುವಾರ, ಆಗಸ್ಟ್ 25, 2016

ಕೃಷ್ಣನ ಕೊಳಲಿನ ಕರೆ,

ಕೃಷ್ಣನ ಕೊಳಲಿನ ಕರೆ,
ಆಲಿಸು ಕೃಷ್ಣನ ಕೊಳಲಿನ ಕರೆ,
ಆಲಿಸು ಕೃಷ್ಣನ ಕೊಳಲಿನ ಕರೆ
ತ್ವರೆ, ತ್ವರೆ
ಕೃಷ್ಣನ ಕೊಳಲಿನ ಕರೆ

ತೊಟ್ಟಲಿನ  ಹಸುಗೂಸ ಮರೆ, ಮರೆ
ಪಕ್ಕದ  ಗಂಡನ ತೊರೆ, ತೊರೆ
ಬೃಂದಾವನಕೆ  ತ್ವರೆ, ತ್ವರೆ
ಕೃಷ್ಣನ ಕೊಳಲಿನ ಕರೆ
ಆಲಿಸು, ಕೃಷ್ಣನ ಕೊಳಲಿನ ಕರೆ


ಮುತ್ತಿನ ಕುಪ್ಪುಸ ಹರಳೋಲೆ
ಮಲ್ಲಿಗೆ ಜಾಜಿ ಮುಡಿಮಾಲೆ
ಹೆಜ್ಜೆಯ ನೇವುರ ಗೆಜ್ಜೆಯ ಪಿಲ್ಲಿ
ಮರೆತೇ ಬಂದೆವೆ ಮನೆಯಲ್ಲೇ ಸಖಿ

ಕೃಷ್ಣನ ಕೊಳಲಿನ ಕರೆ
ಆಲಿಸು, ಕೃಷ್ಣನ ಕೊಳಲಿನ ಕರೆ


ಹೊತ್ತಾರೆ ಹೊರೆಗೆಲಸ, ಮಿಕ್ಕರೆ ಮಿಗಲಿ
ಪಕ್ಕದ ನೆರೆಹೊರೆ ನಕ್ಕರೆ ನಗಲಿ

ಬೃಂದಾವನದೋಳ್ ಆಲಿಸಿದೋ ಮುರಳೀ
ಕೃಷ್ಣನ ಕೊಳಲಿನ ಕರೆ
ಆಲಿಸು, ಕೃಷ್ಣನ ಕೊಳಲಿನ ಕರೆ

ನೇಸರ ಕಿರಣ  ಆಗಸದಿರುಳ  ಒರೆಯಿಸುವ ರೀತಿ
ಕೇಳೀಧರನ ಮುರಳೀಮಾಯೆಗೆ ಮನ ಭಿತ್ತಿತೆ ಭೀತಿ
ಇನ್ನಾಯಿತೆ ಪ್ರೀತಿ,  ಇನ್ನಾಯಿತೆ ಪ್ರೀತಿ
ಕೃಷ್ಣನ ಕೊಳಲಿನ ಕರೆ
ಆಲಿಸು, ಕೃಷ್ಣನ ಕೊಳಲಿನ ಕರೆ


ಸಾಹಿತ್ಯ:  ಪು. ತಿ. ನರಸಿಂಹಾಚಾರ್

ಚಿತ್ರ: ಸುಬ್ಬಾಶಾಸ್ತ್ರಿ
ಸಂಗೀತ:  ವೀಣಾ  ದೊರೆಸ್ವಾಮಿ  ಅಯ್ಯಂಗಾರ್
ಗಾಯನ: ಶ್ರೀರಂಗಂ ಗೋಪಾಲಕಾಮೆಂಟ್‌ಗಳಿಲ್ಲ: