ಶನಿವಾರ, ಜನವರಿ 28, 2017

ಲಾಲಾ ಲಜಪತ್ ರಾಯ್

ದೇಶಕ್ಕಾಗಿ ಪೋಲೀಸ್ ಪೆಟ್ಟು ತಿಂದು ನಿಧನರಾದ
 ಮಹನೀಯ ಲಾಲಾ ಲಜಪತ್ ರಾಯ್

ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಮತ್ತು ಬರಹಗಾರ ಲಾಲಾ ಲಜಪತ್ ರಾಯ್ ಅವರುಪಂಜಾಬಿನ ದುಡಿಕೆ ಎಂಬಲ್ಲಿ ಜನವರಿ 28, 1865ರಲ್ಲಿ  ಜನಿಸಿದರು.

ಭಾರತದಲ್ಲಿ ಲಾಲ್-ಬಾಲ್-ಪಾಲ್ ತ್ರಿವಳಿಗಳು ಎಂದರೆ ಲಾಲಾ ಲಜಪತ ರಾಯ್-ಬಾಲ ಗಂಗಾಧರ ತಿಲಕ್-ಬಿಪಿನ್ ಚಂದ್ರಪಾಲ್.  ಈ ತ್ರಿವಳಿಗಳೆಂದರೆ ಭಾರತೀಯರಿಗೆ ಮೈ ಜುಮ್.  ಬ್ರಿಟಿಷ್ ಸರ್ಕಾರಕ್ಕೆ ಎದೆ ಡಂ. ಇವರು ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಲಕ್ಷ್ಮೀ ಇನ್ಶೂರೆನ್ಸ್ ಕಂಪೆನಿಯ ಪ್ರಾರಂಭಕ್ಕೆ ಬಹಳಷ್ಟು ದುಡಿದಿದ್ದರು.  ತಾಯಿ ಗುಲಾಬ್ ದೇವಿ ಅವರ ಹೆಸರಿನಲ್ಲಿ ಆಸ್ಪತ್ರೆ ಕಟ್ಟಿದ್ದರು.

ಲಾಲಾ ಲಜಪತರಾಯ್ ಅವರ ಪ್ರಸಿದ್ಧ ಬರಹಗಳಲ್ಲಿ   The Story of My Deportation (1908), Arya Samaj (1915), The United States of America: A Hindu’s Impression (1916), Young India (1916). Unhappy India (1928), England's Debt to India (1917), Autobiographical Writings ಮುಂತಾದವು ಸೇರಿವೆ.  ಕೆಲ ವರ್ಷ ಅಮೆರಿಕಕ್ಕೆ ಹೋಗಿ ಬಂದು, ನಂತರದಲ್ಲಿ ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿನ ಭಾಗವಾಗಿ ಹಲವು ವರ್ಷ ಜಿಲು ವಾಸವನ್ನು ಅನುಭವಿಸಿದರು.  


ಪಂಜಾಬಿನ ಕೇಸರಿ ಎಂದು ಪ್ರಸಿದ್ಧರಾದ ಇವರು 1928ರ ವರ್ಷದಲ್ಲಿ ಸೈಮನ್ ಕಮಿಷನ್ ವಿರುದ್ಧ ನಡೆಸಿದ ಚಳುವಳಿ ಸಂದರ್ಭದಲ್ಲಿ ಪೋಲಿಸ್ ಆಕ್ರಮಣದಲ್ಲಿ ತೀವ್ರವಾಗಿ ಗಾಯಗೊಂಡು ನವೆಂಬರ್ 17, 1928ರಂದು ನಿಧನರಾದರು.

Tag: Lala Lajapat Rai

ಕಾಮೆಂಟ್‌ಗಳಿಲ್ಲ: