ಐಂದ್ರಿತ ರೇ
ಐಂದ್ರಿತ
ರೇ
ಕನ್ನಡ
ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಟಿಸುತ್ತಿರುವ
ಹುಡುಗಿಯರಲ್ಲಿ ಐಂದ್ರಿತ ರೇ ಪ್ರಮುಖ ಹೆಸರು.
ಬೆಂಗಾಳಿ ಭಾಷೆಯ ಮನೆತನದ ಹುಡುಗಿ ರಾಜಾಸ್ಥಾನದಲ್ಲಿ ಹುಟ್ಟಿ,
ಬೆಂಗಳೂರಿನಲ್ಲಿ ನೆಲೆಸಿ ಇಂದು ದಕ್ಷಿಣ ಭಾರತದಲ್ಲಿ, ಪ್ರಮುಖವಾಗಿ
ಕನ್ನಡದಲ್ಲಿ ಪ್ರಮುಖ ನಟಿಯಾಗಿ ರೂಪುಗೊಂಡಿದ್ದಾರೆ. ಐಂದ್ರಿತ ರೇ
ಹುಟ್ಟಿದ್ದು ಏಪ್ರಿಲ್ 4, 1985ರಲ್ಲಿ.
(ಕೆಲವೊಂದು ಮೂಲಗಳ ಪ್ರಕಾರ ಏಪ್ರಿಲ್ 16 ಎಂಬ ಅಭಿಪ್ರಾಯವೂ ಇದೆ) ತಂದೆ ಎ ಕೆ. ರಾಯ್. ತಾಯಿ ಸುಮಿತಾ ರೇ.
ಬೆಂಗಳೂರಿನ
ಬಾಲ್ದ್ ವಿನ್ ಶಾಲೆಯಿ ವಿದ್ಯಾರ್ಥಿಯಾದ
ಐಂದ್ರಿತಾ ಅವರಿಗೆ ವೈದ್ಯ ಆಗಬೇಕೆಂಬ ಕನಸಿತ್ತು.
ಟಿ ವಿ ಎಸ್ ಸ್ಕೂಟಿ ಜಾಹೀರಾತಿಗೆ ಮಾಡೆಲಿಂಗ್ ಅವಕಾಶ ಅರಸಿ ಬಂತು. ಹೀಗೆ
ಡಾ ಬಿ ಆರ್ ಅಂಬೇಡ್ಕರ್ ದಂತ
ವೈದ್ಯ ಕಾಲೇಜಿನಲ್ಲಿ ತನ್ನ ಉನ್ನತ
ವ್ಯಾಸಂಗವನ್ನು ಮಾಡುತ್ತಿರುವಾಗಲೇ ಐಂದ್ರಿತ ಮಾಡಲಿಂಗ್ ಅನ್ನು ಹವ್ಯಾಸವನ್ನಾಗಿ
ಮಾಡಿಕೊಂಡರು. ಮುಂದೆ ಅಭಿನಯವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾರೆ.
ಐಂದ್ರಿತಾ
ರೇ ಚಿತ್ರೋಧ್ಯಮಕ್ಕೆ ಎಂಟ್ರಿ ಕೊಟ್ಟಿದ್ದು ಮೆರವಣಿಗೆ ಚಿತ್ರದ ಮೂಲಕ. ಈ ಚಿತ್ರದಲ್ಲಿ
ನಾಯಕಿಯಾಗಿ ಕಾಣಿಸಿಕೊಂಡ ನಂತರ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡ ಐಂದ್ರಿತ ರೇ, ‘ಜಂಗ್ಲಿ’, ‘ಮನಸಾರೆ’ ಚಿತ್ರಗಳಲ್ಲಿನ ಮುಖ್ಯ ಪಾತ್ರಗಳಲ್ಲಿನ
ಮೂಲಕ ಹೆಸರುವಾಸಿಯಾದರು.
ವಾಯುಪುತ್ರ,
ನೂರು ಜನ್ಮಕೂ , ನನ್ನವನು, ವೀರ
ಪರಂಪರೆ, ಮನಸಿನ ಮಾತು, ಧೂಳ್, ಪರಮಾತ್ಮ, ಪಾರಿಜಾತ, ರಜನೀಕಾಂತ,
ಜಿದ್ದಿ, ಟೋನಿ, ಕಡ್ಡಿಪುಡಿ ಮುಂತಾದವು ಐಂದ್ರಿತ ರೇ ಅವರ ಅಭಿನಯದ ಇನ್ನಿತರ
ಕೆಲವು ಚಿತ್ರಗಳು. ಈ ಚಿತ್ರಗಳಲ್ಲಿ ಯೋಗರಾಜ ಭಟ್ ಅವರ ‘ಮನಸಾರೆ’ ಚಿತ್ರದಲ್ಲಿನ ಅವರ ಅಭಿನಯ ವಿಮರ್ಶಕರ ಮೆಚ್ಚುಗೆ
ಪಡೆಯಿತು. ವೃತ್ತಿ ಜೀವನದ ಪ್ರಾರಂಭಾದಲ್ಲೇ
ಅವರಿಗೆ ನಾಗತಿಹಳ್ಳಿ, ಯೋಗರಾಜ್ ಭಟ್, ನಾರಾಯಣ್
ಅಂತಹ ನಿರ್ದೇಶಕರ ಜೊತೆಗಿನ ಅವಕಾಶಗಳು ಸಿಕ್ಕಿದ್ದು ವಿಶೇಷ. ಶಿವರಾಜ್ ಕುಮಾರ್ ಅಂತಹ ಹಿರಿಯ ನಟರ ಜೊತೆ ಕೂಡಾ ನಟಿಸಿದ್ದಾರೆ.
ದೂರದರ್ಶನದ ರಿಯಾಲಿಟೀ ಪ್ರದರ್ಶನಗಳಲ್ಲೂ ಮುಖ ತೋರಿಸಿದ್ದಾರೆ.
ಐಂದ್ರಿತ
ರೇ ಕೆಲವೊಂದು ಹಿಂದಿ,
ತಮಿಳು, ತೆಲುಗು ಮತ್ತು ಬಂಗಾಳಿ ಚಿತ್ರಗಳಲ್ಲೂ ಆಗೊಮ್ಮೆ ಈಗೆಮ್ಮೆ ಎಂಬಂತೆ ಅಭಿನಯಿಸುತ್ತಿದ್ದಾರೆ. ಗಿಟಾರ್ ಕಲಿಯಬೇಕೆಂಬ ಆಸೆ ಅವರಿಗಿದೆ. ಲಕ್ಷ್ಮಣವಾದ ಹುಡುಗಿ. ಚಿತ್ರರಂಗದಲ್ಲಿ
ಲಕ್ಷಣದ ಜೊತೆಗೆ ಒಂದಷ್ಟು ಅದೃಷ್ಟ ಇದ್ದರೆ ಯಶಸ್ಸು ಜೊತೆಗೂಡುತ್ತದೆ. ಅಲ್ಲಲ್ಲಿ ಮೂಡುವ ಸಣ್ಣ ಪುಟ್ಟ ವಿವಾದಗಳು ಕೂಡಾ ಓಡಿ ಹೋದೀತು.
ಅವಕಾಶಗಳು ಸಿಕ್ಕ ಹಾಗೆಲ್ಲ ಪ್ರತಿಭೆಯೂ
ಪ್ರಕಾಶಿಸುತ್ತಾ ಬರುತ್ತದೆ. ಅಂತಹ
ಅದೃಷ್ಟ ಮತ್ತು ಆ ಅದೃಷ್ಟವನ್ನು ಪಡೆಯುವ ಶ್ರದ್ಧೆ ಈ ಹುಡುಗಿಯಲ್ಲಿ ಮೂಡಲಿ ಎಂದು ಹಾರೈಸಿ
ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳನ್ನು ಹೇಳೋಣ.
ಎಲ್ಲಕ್ಕಿಂತ ಮುಖ್ಯವಾಗಿ ಗೌರವಪೂರ್ಣ, ಆರೋಗ್ಯಪೂರ್ಣ,
ಸಂತಸಪೂರ್ಣ ಮತ್ತು ಸದ್ಭಾವಪೂರ್ಣ ಬದುಕು ಇಂತಹ ಯುವಪ್ರತಿಭೆಗಳಿಗೆ ದೊರಕಲಿ.
ಕಾಮೆಂಟ್‌ಗಳು