ಗೋಮಾತೆ
ವೇದಗಳಿಗೆ ಮುಂಚೆಯೇ
ದೊರೆತ ದಿವ್ಯಮಾತೆಯೇ
ಕರುಣೆಯಿಂದ ನಮ್ಮ ಸಾಕಿ
ಅಮೃತವೆರೆದ ಪ್ರೀತಿಯೇ
ಕಾಮಧೇನು ನೀನು ನಿನ್ನ
ಮಕ್ಕಳಮ್ಮ ನಾವು
ನಮಗೆಂದೇ ಮೈತಾಳಿದ
ಮನುಜಮಾತೆ ನೀನು
ನಿನ್ನ ಕಂದನಾಹಾರದ
ಪಾಲೊದನು ನಮಗೆ
ಬಿಟ್ಟು ಕೊಡುವ ತ್ಯಾಗಮಯೀ
ಸಮ ಯಾರೇ ನಿನಗೆ?
ಹುಲ್ಲು ತಿಂದು ಹಾಲು ಕರೆವ
ನಡೆದಾಡುವ ಅದ್ಭುತ
ನಿನ್ನ ನಿಜವ ಗ್ರಹಿಸಿದೆ
ಆಧ್ಯಾತ್ಮಿಕ ಭಾರತ
ಹರಿ ನೀಡಿದ ವರಗಳೆರಡು
ಗೀತೆ, ಗೋಮಾತೆ
ದೇಹಕೊಂದು ಆತ್ಮಕೊಂದು
ಮನುಜನ ಉದ್ಧಾರಕೆ
ಸಾಹಿತ್ಯ: ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
Tag: Gomaathe
Tag: Gomaathe
ಕಾಮೆಂಟ್‌ಗಳು