ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೃಷ್ಣ ಎನಬಾರದೆ

ಕೃಷ್ಣ ಎನಬಾರದೆ ಶ್ರೀ ಕೃಷ್ಣ ಎನಬಾರದೆ
ನರ ಜನ್ಮ ಬಂದಾಗ ನಾಲಿಗೆ ಇರುವಾಗ
ಕೃಷ್ಣ ಎನಬಾರದೆ
ಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲಾ
ಕೃಷ್ಣ ಎನ್ನಬಾರದೆ
ಶ್ರೀ ಕೃಷ್ಣ ಎನಬಾರದೆ

ಗಂಧವ ಪೂಸಿ ತಾಂಬೂಲವ ಮೆಲುವಾಗೊಮ್ಮೆ
ಕೃಷ್ಣ ಎನಬಾರದೆ
ತನ್ನ ಮಂದಗಮನೆ ಕೂಡ ಸರಸವಾಡುತ್ತಲೊಮ್ಮೆ
ಕೃಷ್ಣ ಎನಬಾರದೆ

ಕಂದನ ಬಿಗಿದಪ್ಪಿ ಮುದ್ದಾಡುತ್ತಲೊಮ್ಮೆ
ಕೃಷ್ಣ ಎನಬಾರದೆ
ಬಹು ಚೆಂದೊಳ್ಳ ಹಾಸಿಗೆ ಮೇಲೆ ಕುಳಿತೊಮ್ಮೆ
ಕೃಷ್ಣ ಎನಬಾರದೆ
ಶ್ರೀ ಕೃಷ್ಣ ಎನಬಾರದೆ

ದೊಡ್ಡ ದಾರಿಯ ನಡೆವಾಗ ಭಾರವ ಹೊರುವಾಗ
ಕೃಷ್ಣ ಎನಬಾರದೆ
ದುರಿತ ರಾಶಿಗಳ ತರಿದು ಬಿಸಾಡುತಲೊಮ್ಮೆ
ಕೃಷ್ಣ ಎನಬಾರದೆ
ಸದಾ ಗರುಡ ವಾಹನ ಸಿರಿ ಪುರಂದರ ವಿಟ್ಠಲನ್ನೆ
ಕೃಷ್ಣ ಎನಬಾರದೆ
ಶ್ರೀ ಕೃಷ್ಣ ಎನಬಾರದೆ

ಸಾಹಿತ್ಯ: ಪುರಂದರದಾಸರು

Tag: Krishna enabarade, Krishna enabaarade

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ