ಬಾರೋ ಗುರುರಾಘವೇಂದ್ರ
ಬಾರೋ ಗುರುರಾಘವೇಂದ್ರ
ಬಾರಯ್ಯ ಬಾ ಬಾ - ಬಾರೋ
ಗುರುರಾಘವೇಂದ್ರ
ಹಿಂದುಮುಂದಿಲ್ಲೆನಗೆ ನೀ ಗತಿ
ಎಂದು ನಂಬಿದೆ ನಿನ್ನ ಪಾದವ
ಬಂಧನವ ಬಿಡಿಸೆನ್ನ ಕರಪಿಡಿ
ನಂದಕಂದಮುಕುಂದ ಬಂಧೋ
ಬಾರೋ ಗುರುರಾಘವೇಂದ್ರ
ಸೇವಕನೆಲವೊ ನಾನು - ಧಾವಿಸಿ ಬಂದೆನು
ಸೇವೆ ನೀಡೆಲೊ ನೀನು
ಸೇವಕನ ಸೇವೆಯನು ಸೇವಿಸಿ
ಸೇವ್ಯ-ಸೇವಕ ಭಾವವೀಯುತ
ಠಾವುಗಾಣಿಸಿ ಪೊರೆಯೊ ಧರೆಯೊಳು
ಪಾವನಾತ್ಮಕ ಕಾವ ಕರುಣಿ
ಬಾರೋ ಗುರುರಾಘವೇಂದ್ರ
ಕರೆದರೆ ಬರುವಿಯೆಂದು - ಸಾರುವುದು
ಡಂಗುರ
ತ್ವರಿತದಿ ಒದಗೋ ಬಂದು
ಜರಿಯ ಬೇಡವೊ ಬರಿದೆ ನಿನ್ನಯ
ವಿರಹ ತಾಳದೆ ಮನದಿ ಕೊರಗುವೆ
ಹರಿಯ ಸ್ಮರಣೆಯ ನಿರುತದಲಿ ಎನ
ಗ್ ಹರುಷದಲಿ ನೀನಿರುತ ಕೊಡುತಲಿ
ಬಾರೋ ಗುರುರಾಘವೇಂದ್ರ
ನರಹರಿಪ್ರಿಯನೆ ಬಾ - ಗುರುಶ್ರೀಶವಿಠ್ಠಲನ
ಕರುಣಾಪಾತ್ರನೆ ಬೇಗ ಬಾ
ಗುರುವರನೆ ಪರಿಪೋಷಿಸೆನ್ನನು
ಮರೆಯದಲೆ ತವಚರಣಕೋಟಿಯಲಿರಿಸಿ
ಚರಣಾಂಬುಜವ ತೋರುತ
ತ್ವರಿತದಲಿ ಓಡೋಡಿ ಬಾ ಬಾ
ಬಾರೋ ಗುರುರಾಘವೇಂದ್ರ
ಸಾಹಿತ್ಯ: ಗುರುಶ್ರೀಶವಿಠ್ಠಲರು
Tag: Baro Guru Raghavendra
ಕಾಮೆಂಟ್‌ಗಳು