ಚಂದನದ ಗೊಂಬೆ
ಆಕಾಶದಿಂದ ಧರೆಗಿಳಿದ ರಂಭೆ
ಇವಳೇ ಇವಳೇ ಚಂದನದ ಗೊಂಬೆ
ಚೆಲುವಾದ ಗೊಂಬೆ
ಚಂದನದಾ ಗೊಂಬೆ
ಬಂಗಾರದಿಂದ ಬೊಂಬೆಯನು ಮಾಡಿದ
ಚಂದಿರನ ಕಾಂತಿಯ ತನುವಲ್ಲಿ ತುಂಬಿದ
ತಾವರೆಯ ಅಂದ ಕಣ್ಣಲ್ಲಿ ತಂದ
ಈ ಸಂಜೆ ಕೆಂಪನು ಕೆನ್ನೆಯಲಿ ತುಂಬಿದ
ಆ ದೇವರೇ ಕಾಣಿಕೆ ನೀಡಿದಾ
ನನ್ನ ಜೊತೆ ಮಾಡಿದ
ಆಹಾ, ಆಕಾಶದಿಂದ ಧರೆಗಿಳಿದ ರಂಭೆ
ಇವಳೇ ಇವಳೇ ಚಂದನದ ಗೊಂಬೆ
ಚೆಲುವಾದ ಗೊಂಬೆ ಚಂದನದಾ ಗೊಂಬೆ
ನಡೆವಾಗ ನಿನ್ನ ಮೈಮಾಟವೇನು
ಆ ಹೆಜ್ಜೆ ನಾದಕೇ ಮೈಮರೆತು ಹೋದೆನು
ಕಣ್ಣಲ್ಲೆ ನೂರು ಹೊಂಗನಸು ಕಂಡೆನು
ಆ ಕನಸಿನಲ್ಲೇ ನಾ ಕರಗಿ ಹೋದೆನು
ಆ ಹೂ ನಗೆ ಕಂಡೆನು ಸೋತೆನೂ
ನಿನ್ನ ಸೆರೆಯಾದೆನು
ಆಹಾ, ಆಕಾಶದಿಂದ ಧರೆಗಿಳಿದ ರಂಭೆ
ಇವಳೇ ಇವಳೇ ಚಂದನದ ಗೊಂಬೆ
ಚೆಲುವಾದ ಗೊಂಬೆ ಚಂದನದಾ ಗೊಂಬೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಮ್
Tag: Akaashadinda dharegilida rambhe Akashadinda daregilida rambe
ಕಾಮೆಂಟ್‌ಗಳು