ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆಹಾ ಮೈಸೂರು ಮಲ್ಲಿಗೆ ದುಂಡು ಮಲ್ಲಿಗೆ

ಆಹಾ ಮೈಸೂರು ಮಲ್ಲಿಗೆ ದುಂಡು ಮಲ್ಲಿಗೆ
ನನ್ನಾ
ಒಲವಿನ ಸಿರಿಯಾಗಿ ಅರಳುತ ಚೆಲುವಾಗಿ
ಮನಸಲಿ ನೀನೇ ತುಂಬಿರುವೆ
ಮನಸಲಿ ನೀನೇ ತುಂಬಿರುವೆ

ಅಲೆಅಲೆ ನಲಿಯುತಿದೆ ಹನಿಹನಿ ಚಿಮ್ಮುತಿದೆ
ಮುಗಿಲ ಕಡೆ ಚಪಂ ಚಪಂ ನಾರಿ ಸುಂದರಿ
ನೋಡೇ ವಯ್ಯಾರಿ ವಯ್ಯಾರಿ
ಓಹೋ ಚೆಲುವಾoತ ಚೆನ್ನಿಗ ನನ್ನ ಚೆನ್ನಿಗ
ನಿನ್ನಾ ಸೊಗಸಿಗೆ ಬೆರಗಾದೆ ಮಾತಿಗೆ ಮರುಳಾದೆ
ನನ್ನಲಿ ನೀನೇ ತುಂಬಿರುವೆ

ಬಾಳೆoಬ ಕಡಲಲ್ಲಿ ನಾನು ಕಂಡೆ ಬಂಗಾರದ ಹೆಣ್ಣು ನೀನು
ಬಾಳೆoಬ ಕಡಲಲ್ಲಿ ನಾನು ಕಂಡೆ ಬಂಗಾರದ ಹೆಣ್ಣು ನೀನು
ಕಣ್ಣಿಂದ ಬಲೆ ಬೀಸಿ ಸೆಳೆದೆ ಸೆರೆಯಾಗಿ ಮನಸೋತು ನಡೆದೆ
ಜೊತೆಗಾರ ನೀನಾದೆ ನನಗೆ ಆಹಾ ಜೊತೆಗಾರ ನೀನಾದೆ ನನಗೆ
ಬಾ ಗೆಳೆಯ ಆಹಾ ನನ್ನಿನಿಯ 
ಚೆನ್ನ ಇನ್ನು ಎಂದೂ ಮುಂದೆ ನಿನ್ನದೆ ಹೃದಯ
ಓಹೋ ಚೆಲುವಾoತ ಚೆನ್ನಿಗ ನನ್ನ ಚೆನ್ನಿಗ
ನಿನ್ನಾ ಸೊಗಸಿಗೆ ಬೆರಗಾದೆ ಮಾತಿಗೆ ಮರುಳಾದೆ
ನನ್ನಲಿ ನೀನೇ ತುಂಬಿರುವೆ

ಕೈಬಳೆ ಆಡುತಾ ಘಲ್ ಘಲ್ ಎನ್ನಲು, 
ನನ್ನೆದೆ ಸೋಲುತಾ ಹಾಯ್ ಹಾಯ್ ಎನ್ನಲು
ಕೈಬಳೆ ಆಡುತಾ ಘಲ್ ಘಲ್ ಎನ್ನಲು, 
ನನ್ನೆದೆ ಸೋಲುತಾ ಹಾಯ್ ಹಾಯ್ ಎನ್ನಲು
ಹೆಜ್ಜೆಯ ತಾಳಕ್ಕೆ ನೂಪುರ ಮೇಳಕ್ಕೆ, 
ಹೆಜ್ಜೆಯ ತಾಳಕ್ಕೆ ನೂಪುರ ಮೇಳಕ್ಕೆ
ಒಲಿದು ಹಾಡಲೆಂದು ಬಂದೆ, ಮನಸು ನೀಡಲೆಂದು ಬಂದೆ
ಬಾ ವೀರ,  ಆಹಾ ಹಮ್ಮೀರ, ಬಲ್ಲೆ ಎಲ್ಲಾ ನನ್ನ ನಲ್ಲ, ಬಾ ಸರದಾರ

ಆಹಾ ಮೈಸೂರು ಮಲ್ಲಿಗೆ ದುಂಡು ಮಲ್ಲಿಗೆ
ಓಹೋ ಚೆಲುವಾoತ ಚೆನ್ನಿಗ ನನ್ನ ಚೆನ್ನಿಗ
ನಿನ್ನಾ ಸೊಗಸಿಗೆ ಬೆರಗಾದೆ ಮಾತಿಗೆ ಮರುಳಾದೆ
ನನ್ನಲಿ ನೀನೇ ತುಂಬಿರುವೆ
ನನ್ನಲಿ ನೀನೇ ತುಂಬಿರುವೆ

 ಚಿತ್ರ: ಬಂಗಾರದ ಮನುಷ್ಯ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ಜಿ.ಕೆ.ವೆಂಕಟೇಶ್
ಗಾಯನ : ಪಿ. ಬಿ. ಶ್ರೀನಿವಾಸ್, ಪಿ. ಸುಶೀಲ ಮತ್ತು ಸಂಗಡಿಗರು 


Tag: Aaha mysooru mallige

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ