ಕರಣಂ ಮಲ್ಲೇಶ್ವರಿ
ಕರಣಂ ಮಲ್ಲೇಶ್ವರಿ
ಕರಣಂ ಮಲ್ಲೇಶ್ವರಿ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ ಗೆದ್ದ ಪ್ರಥಮ ಹುಡುಗಿ. ಸಿಡ್ನಿ ಒಲಿಂಪಿಕ್ಸ್ 2000 ವರ್ಷದಲ್ಲಿ ಈ ಹುಡುಗಿ ಭಾರತಕ್ಕೆ ಭಾರ ಎತ್ತುವ ಮೂಲಕ ಭಾರತಕ್ಕೆ ಕಂಚು ಪದಕ ತಂದು ಕೀರ್ತಿ ತಂದಿದ್ದರು. ಏಷ್ಯನ್ ಕ್ರೀಡಾ ಕೂಟದಲ್ಲಿ ಬೆಳ್ಳಿ ಗೆದ್ದರು. ನಮ್ಮ ದೇಶಕ್ಕೆ ಒಲಿಂಪಿಕ್ಸ್ ಸ್ಪರ್ಧೇಲಿ ಪದಕ ಗೆಲ್ಲೋವ್ರಿಲ್ಲ ಅಂತ ತುಂಬಾ ಬೇಜಾರು ಮಾಡ್ಕೋತಾ ಇದ್ವಿ. ಗೆದ್ದವರು ನಮ್ಮ ನೆನಪಲ್ಲಿ ಇರೋದು ಕೂಡಾ ತುಂಬಾ ಕಡಿಮೆ ಅಲ್ವ? ಕರಣಂ ಮಹೇಶ್ವರಿ ಅಂತಹ ಹುಡುಗೀರು ನಮ್ಮ ದೇಶಕ್ಕೆ ಕೊಟ್ಟ ಭರವಸೆ ತುಂಬಾ ದೊಡ್ದು. ನಮ್ಮ ಮಕ್ಕಳಿಗೆ ಆಗಾಗ ಇಂತಹ ಸಾಮರ್ಥ್ಯಶಾಲಿಗಳ ಬಗ್ಗೆ ಹೇಳೋ ಅವಶ್ಯಕತೆಯಿದೆ. ಇಂಥಹವರನ್ನು ಗೌರವಿಸಿ, ಹರಸಿ, ಮಾರ್ಗದರ್ಶಿಗಳಂತೆ ನಡೆಸಿಕೊಳ್ಳುವ ಜವಾಬ್ದಾರಿ ಕೂಡಾ ನಮ್ಮ ಮೇಲಿದೆ. ಕರಣಂ ಮಲ್ಲೇಶ್ವರಿಗೆ ಹುಟ್ಟಿದ ಹಬ್ಬದ ಹಾರ್ದಿಕ ಶುಭಾಶಯಗಳು.
Tag: Karanam Malleshwari
ಕಾಮೆಂಟ್‌ಗಳು