ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹೂವೆ ಹೂವೆ ಏಕೆ ಅರಳಲಿಲ್ಲ



ಹೂವೆ ಹೂವೆ ಏಕೆ ಅರಳಲಿಲ್ಲ, 
ನಾನೇನ್ ಮಾಡ್ಲಿ ಬಿಸಿಲೇ ಬರಲಿಲ್ಲ, 

ಬಿಸಿಲೇ ಬಿಸಿಲೇ ಏಕೆ ಬರಲಿಲ್ಲ, 
ನಾನೇನ್ ಮಾಡ್ಲಿ ಹುಲ್ಲು ಅಡ್ಡ ತಡೀತು, 

ಹುಲ್ಲೆ ಹುಲ್ಲೆ ಏಕೆ ಅಡ್ಡ ತಡ್ಡೆ, 
ನಾನೇನ್ ಮಾಡ್ಲಿ ಹಸೂನೇ ಬರ್ಲಿಲ್ಲ, 

ಹಸುವೇ  ಹಸುವೇ ಏಕೆ ಬರಲಿಲ್ಲ, 
ನಾನೇನ್ ಮಾಡ್ಲಿ ಹುಡ್ಗ ಕರ್ಕೋಂಡ್ ಹೋಗ್ಲಿಲ್ಲ, 

ಹುಡುಗ ಹುಡುಗ ಏಕೆ ಕರ್ಕೋಂಡ್ ಹೋಗ್ಲಿಲ್ಲ, 
ನಾನೇನ್ ಮಾಡ್ಲಿ ಅವ್ವ ರೊಟ್ಟಿ ಕೊಡ್ಲಿಲ್ಲ, 

ಅವ್ವ ಅವ್ವ ಯಾಕೆ ರೊಟ್ಟಿ ಕೊಡ್ಲಿಲ್ಲ, 
ನಾನೇನ್ ಮಾಡ್ಲಿ ಅಪ್ಪ ಸಂಬ್ಳ ತರ್ಲೀಲ್ಲ, 

ಅಪ್ಪ ಅಪ್ಪ ಯಾಕೆ ಸಂಬಳ ತರ್ಲೀಲ್ಲ, 
ನಾನೇನ್ ಮಾಡ್ಲಿ ಕೆಲಸಸಾನೇ ಸಿಗ್ಲಿಲ್ಲ!!!!!!!!! 

(ನಾವು ಪುಟ್ಟವರಿದ್ದಾಗ ಆಡುತ್ತಾ ಹಾಡುತ್ತಿದ್ದುದು)
Photo Courtesy: JOHN W. MACDONALD'S WEBLOG


Tag: Huve Huve eke aralalilla, Hoove Hoove eke aralalilla

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ