ಬಾರೋ ನಮ್ಮ ಮನೆಗೆ ಶ್ರೀರಾಘವೇಂದ್ರ
ಬಾರೋ ನಮ್ಮ ಮನೆಗೆ ಶ್ರೀರಾಘವೇಂದ್ರ
ಬಾರೊ ದುಃಖಾಪಹಾರ ಬಾರೋ ದುರಿತದೂರ
ಬಾರಯ್ಯ ಸನ್ಮಾರ್ಗ ದಾರಿ ತೋರುವ ಗುರುವೆ
ಬಾಲ ಪ್ರಹ್ಲಾದನಾಗಿ ಖೂಳ ಕಶ್ಯಪುವಿಗೆ
ಲೋಲ ಶ್ರೀನರಹರಿಯ ಕಾಲರೂಪವ ತೋರ್ದೆ
ವ್ಯಾಸನಿರ್ಮಿತ ಗ್ರಂಥ ಮಧ್ವಕೃತ ಭಾಷ್ಯವ
ಬೇಸರಿಸದೆ ಓದಿ ಮೆರೆವ ವ್ಯಾಸಮುನಿಯೆ
ಮಂತ್ರಗೃಹದಲಿನಿಂತ ಸುಯತಿವರ್ಯ
ಅಂತ ತಿಳಿಯದೊ ನೀ ಅಂತರದೊಳು
ಭೂತಪ್ರೇತಗಳನು ಘಾತಿಸಿಬಿಡುವಂಥ
ಖ್ಯಾತಿಯುತ ಯತಿನಾಥನೆ ಸ್ತುತಿಸುವೆ
ಕುಷ್ಟರೋಗಾದಿಗಳ ನಷ್ಟ ಮಾಡುವಂಥ
ಅಷ್ಟಮಹಿಮೆಯುತ ಶ್ರೇಷ್ಠ ಮುನಿಯೆ
ಕರೆದರೆ ಬರುವಿಯೆಂಬೊ ಕೀರುತಿ ಕೇಳಿ ನಾ
ಕರೆದೆನೊ ಕರುಣದಿ ಕರವ ಪಿಡಿಯೊ
ಭಕ್ತವತ್ಸಲನೆಂಬ ಬಿರುದು ನಿಂದಾದರೆ
ಸಕ್ತನ ಮೊರೆ ಕೇಳಿ ಮಧ್ವೇಶವಿಠಲದಾಸ
ಸಾಹಿತ್ಯ: ಶ್ರೀಮಧ್ವೇಶವಿಠ್ಠಲದಾಸರು
Tag: Baro Namma Manege Sri Raghavendra
Tag: Baro Namma Manege Sri Raghavendra
ಕಾಮೆಂಟ್‌ಗಳು