ಬಾರಮ್ಮ ಗುರುಸೇವೆ ಮಾಡುವ
ಬಾರಮ್ಮ ಗುರುಸೇವೆ ಮಾಡುವ
ನಿತ್ಯ ಭೂರಿ ಬ್ರಹ್ಮಾನಂದ ಪೊಂದುವ
ಎಂದಿಗಾದರು ಸಾವು ತಪ್ಪದು
ಗುರು ಹೊಂದದೆ ನಿಜಮುಕ್ತಿ ದಕ್ಕದು
ಸುಂದರ ತನುವಿದು ನಿಲ್ಲದು
ಮೋಹ ಬಂಧನದಿಂ ಸುಖವಿಲ್ಲದು
ಗಂಗಾಯಮುನೆ ಸ್ನಾನ ಗೈಯುವ
ಅಲ್ಲಿ ಬಂಗಾರ ಮಹಲಿನೊಳಾಡುವ
ಹಿಂಗದೆ ಕಳೆ ಬಿಂದು ನೋಡುವ
ನಿತ್ಯ ಮಂಗಳ ವಾದ್ಯವ ಕೇಳುವ
ವರ ಹಂಸಕಲ್ಪವನೇರುವ
ಬ್ರಹ್ಮಪುರದೊಳುಯ್ಯಾಲೆಯ ನಾಡುವ
ನೆರೆ ಸೂಕ್ಷ್ಮದ್ವಾರವ ತೆರೆಯುವ
ಅಲ್ಲಿ ಪರಮಾತ್ಮನೊಳು
ಕೂಡಿ ಸುಖಿಸುವ
ಜೀವಭಾವನೆ ಭ್ರಾಂತಿ ಅಳಿವುದು
ಆತ್ಮ ಭಾವನೆ ಸ್ಥಿರವಾಗಿ ನಿಲ್ಲುವುದು
ಸಾವು ಹುಟ್ಟೆಂಬುವುದಳಿಯುವುದು
ನಿತ್ಯಾ ಕೈವಲ್ಯಾನಂದವೆ ನಿಲುವುದುದು
ನಿತ್ಯ ಗುರು ಸಂಜೀವನ ಸೇರುವ
ಚಿತ್ತ ವೃತ್ತಿಗಳೆಲ್ಲವನಳಿಯುವ
ಸತ್ತು ಚಿತ್ತಾನಂದ ವಸ್ತುವ ಸೇರಿ
ಮುಕ್ತಿರಾಜ್ಯದಿ ಮನೆ ಮಾಡುವ
ಬಾರಮ್ಮ ಗುರು ಸೇವೆ ಮಾಡುವ
Tag: Baramma Guru seve Maduva
Tag: Baramma Guru seve Maduva
ಕಾಮೆಂಟ್‌ಗಳು