ಕದ್ದು ನೋಡುವೇ ಏಕೆ
ಜಗವೆಂಬ ಗುಡಿಯಲ್ಲಿ
ಬಾಳೆಂಬ ಮಂಟಪದಿ
ಕುಳಿತ ನವ ವಧು ವರರೇ
ಹೃದಯಗಳು ಬೆಸೆದಾಯ್ತು
ಭಯವೇಕೆ ಕಣ್ಣಿಗೆ
ಕದ್ದು ನೋಡುವೇ ಏಕೆ
ಕದ್ದು ನೋಡುವೇ ಏಕೆ
ಎಲೆ ಕಣ್ಣೇ
ಕದಿವುದೆಲ್ಲಾ
ನಲುಮೆಯಲ್ಲಿದ್ದಿರುವಾಗ
ಕದ್ದು ನೋಡುವೇ ಏಕೆ
ರೂಪವ ನೋಡಿ ಆತುರವೇ
ದೃಷ್ಟಿ ತಾಕೀತೆಂಬ ಕಾತುರವೇ
ಆರಂಭವೀಗ ಬದುಕು
ಕಾದಿರುವಾಗಾ
ಅವಸರವೇಕೀಗ ಎಲ್ಲವೂ
ನಿನ್ನದೇ ಆಗಿರುವಾಗ
ಕದ್ದು ನೋಡುವೇ ಏಕೆ
ನೋಡುವ ಆಸೆಗೆ ತಡೆಯೇನು
ಮಮತೆಯ ಕಂಗಳು ಕುರುಡೇನು
ಸಂತಸದ ನೋಟ ತುಂಬಿ
ನಿಂತಿರುವಾಗ
ಕದಿಯುವೇ ಏನನ್ನು
ಎಲ್ಲರ ಎದುರಲಿ ನೀನಿರುವಾಗಾ
ಕದ್ದು ನೋಡುವೇ ಏಕೆ
ಕದ್ದು ನೋಡುವೇ ಏಕೆ
ಎಲೆ ಕಣ್ಣೇ
ಕದೀವುದೆಲ್ಲಾ
ನಲುಮೆಯಲಿದ್ದಿರುವಾಗ
ಕದ್ದು ನೋಡುವೇ ಏಕೆ
ಚಿತ್ರ: ಬಾಂಧವ್ಯ
ಸಾಹಿತ್ಯ: ಎಚ್. ಕೆ. ಯೋಗಾನರಸಿಂಹ
ಸಂಗೀತ: ಆರ್. ರತ್ನ
ಗಾಯನ: ಎಸ್. ಜಾನಕಿ
Tag: Kaddu noduve eke ele kanne
ಕಾಮೆಂಟ್‌ಗಳು