ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನ‍ಂಬಿದೆ, ನಿನ್ನ ನಾದ ದೇವತೆಯೆ...


ನ‍ಂಬಿದೆ,  ನಿನ್ನ ನಾದ ದೇವತೆಯೆ
ಅಭಿಮಾನ ತಳೆದ ತಾಯೆ ಭಾರತಿಯೇ
ನಂಬಿದೆ

ನೆಲೆಯಾದ ಒಂದೆ ಓಂಕಾರದೆ
ಲಯವಾಗಿ ಹೋದೆ ನೀ ಶಾರದೆ
ನಂಬಿದೆ, ನಿನ್ನ ನಾದ ದೇವತೆಯೆ
ಅಭಿಮಾನ ತಳೆದ ತಾಯೆ ಭಾರತಿಯೆ
ನಂಬಿದೆ

ವೀಣೆಗು ತಂತಿಗು ನೀ ನುಡಿ ಹಾಕಲು
ನಾದ ಒಲಿದು ಝೇಂಕಾರ ಮಾಡಲು
ಆಸೆ ನೂರೊಂದಿದೆ, ನಿನ್ನೇ ಕಾದಿದೆ
ಬಾರಾ... ಹಾಡಾ
ನೀ ಎನ್ನ ದೇವತೆ
ಕಂಠ ಬಿಗಿದು ಬಾಯಾರಿದೆ
ತುಂಬಿದೆದೆಯ ಆನಂದದೆ

ನಂಬಿದೆ, ನಿನ್ನ ನಾದ ದೇವತೆಯೆ
ಅಭಿಮಾನ ತಳೆದ
ತಾಯೆ ಭಾರತಿಯೆ, ತಾಯೆ ಭಾರತಿಯೆ, ತಾಯೆ ಭಾರತಿಯೆ
ನಂಬಿದೆ,  ನಿನ್ನ ನಂಬಿದೆ

ಸಾಹಿತ್ಯ: ಜಿ. ವಿ. ಅಯ್ಯರ್
ಚಿತ್ರ ಸಂಧ್ಯಾರಾಗ
ಗಾಯನ: ಎಸ್. ಜಾನಕಿ.
ಸಂಗೀತ: ಜಿ. ಕೆ. ವೆಂಕಟೇಶ್


Tag: Nambide ninna nada devateye

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ