ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿರಹಾ, ನೂರು ನೂರು ತರಹ


ವಿರಹಾ, ನೂರು ನೂರು ತರಹ
ವಿರಹಾ, ಪ್ರೇಮ ಕಾವ್ಯದಾ ಕಹಿ ಬರಹ
ಹರೆಯ ಉಕ್ಕಿ ಕರೆವ ಹಕ್ಕಿ,
ವಿರಹ ಸಹಿಸೆ, ಸಹಿಸೆ ತಾನೆಂದಿದೇ

ಭಾವಾಂತರಂಗದಲ್ಲಿ ಅಲ್ಲೋಲ ಕಲ್ಲೋಲ
ಪ್ರೇಮಾಂತರಂಗದಲ್ಲಿ ಏನೇನೊ ಕೋಲಾಹಲ,
ಭೃಂಗ ಸಂಗ ಬಯಸಿ ಹೂವು,
ಮನದಿ ಬಾಡಿ, ಬಾಡಿ ತಾನೊಂದಿದೇ

ಗಂಧರ್ವ ಲೋಕದಲ್ಲಿ
ಗಂಧರ್ವ ಲೋಕದಲ್ಲಿ ರೋಮಾಂಚ ರಾತ್ರಿ,
ಮಧುಚಂದ್ರ ಮಂಚದಲ್ಲಿ ರಸಹೀನ ರಾತ್ರಿ,
ಮಧುರ ಮನದ ಆಸೆ ಚಿಗುರ,
ಚಿವುಟಿ ಚಿವುಟಿ ಜೀವ ನೋವಾಗಿದೇ

ಚಿತ್ರ: ಎಡಕಲ್ಲು ಗುಡ್ಡದ ಮೇಲೆ
ಸಾಹಿತ್ಯ: ವಿಜಯನಾರಸಿಂಹ
ಸಂಗೀತ: ಎಂ. ರಂಗರಾವ್
ಗಾಯನ: ಪಿ. ಸುಶೀಲ


Tag: Viraha nooru nooru taraha, Viraha nuru nuru taraha

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ