ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನೂರೊಂದು ನೆನಪು, ಎದೆಯಾಳದಿಂದ

ನೂರೊಂದು ನೆನಪು, ಎದೆಯಾಳದಿಂದ
ಹಾಡಾಗಿ ಬಂತೂ ಆನಂದದಿಂದ
ಸಿಂಧೂರ ಬಿಂದು, ನಗಲಮ್ಮ ಎಂದೂ
ಎಂದೆಂದು  ಇರಲಮ್ಮ ಈ ದಿವ್ಯ ಬಂಧಾ...
ನೂರೊಂದು ನೆನಪು, ಎದೆಯಾಳದಿಂದ
ಹಾಡಾಗಿ ಬಂತೂ ಆನಂದದಿಂದ

ಒಲವೆಂಬ ಲತೆಯು ತಂದಂತ ಹೂವು,
ಮುಡಿಯೇರೆ ನಲಿವು ಮುಡಿ ಜಾರೆ ನೋವು,
ಕೈ ಗೂಡಿದಾಗ ಕಂಡಂಥ ಕನಸು,
ಅದೃಷ್ಟದಾಟ ತಂದಂಥ  ಸೊಗಸು.
ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ
ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ,
ನೀವೆಂದು ಇರಬೇಕು ಸಂತೋಷದಿಂದಾ..
ನೂರೊಂದು ನೆನಪು, ಎದೆಯಾಳದಿಂದ
ಹಾಡಾಗಿ ಬಂತೂ ಆನಂದದಿಂದ

ತುಟಿ ಮೇಲೆ ಬಂದಂತ ಮಾತೊಂದೇ ಒಂದು
ಎದೆಯಲ್ಲಿ ಉಳಿದದ್ದು ಮುನ್ನೂರ ಒಂದು
ಮೂರು ಗಂಟಲ್ಲಿ ಈ ಬಾಳ ನಂಟು,
ಕೇಳಿ ಪಡೆದಾಗ ಸಂತೋಷ ಉಂಟು.
ನಿನ್ನ ಹರುಷದಲಿ ನನ್ನ ಉಸಿರಿರಲಿ
ನಿನ್ನ ಹರುಷದಲಿ ನನ್ನ ಉಸಿರಿರಲಿ
ನನ್ನೆಲ್ಲ ಹಾರೈಕೆ  ಈ ಹಾಡಿನಿಂದಾ...
ನೂರೊಂದು ನೆನಪು, ಎದೆಯಾಳದಿಂದ
ಹಾಡಾಗಿ ಬಂತೂ ಆನಂದದಿಂದ

ಚಿತ್ರ: ಬಂಧನ
ಸಾಹಿತ್ಯ:ಆರ್. ಎನ್. ಜಯಗೋಪಾಲ್
ಸಂಗೀತ: ಎಂ. ರಂಗರಾವ್
ಗಾಯಕರು: ಎಸ್ ಪಿ ಬಾಲಸುಬ್ರಮಣ್ಯಂ


Tag: Nurondu Nenapu Edeyaladinda

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ