ಕನ್ನಡಮ್ಮನ ದೇವಾಲಯ
ಕನ್ನಡಮ್ಮನ ದೇವಾಲಯ ಕಂಡೆ ಹೆಣ್ಣಿನ ಕಂಗಳಲಿ
ಕನ್ನಡ ನಾಡಿನ ಚರಿತೆಯನೇ ಕಂಡೆ ಆಕೆಯ ಹೃದಯದಲಿ
ವಂದನೆ ಆ ಹೆಣ್ಣಿಗೆ, ಅಭಿನಂದನೆ ಆ ಕಣ್ಣಿಗೆ
ಕಂಡೆ ಅವಳ ಮಾತಿನಲ್ಲಿ ಶಾರದಾಂಬೆ ವೀಣೆಯ
ಅವಳ ನಡೆಯ ಲಾಸ್ಯದಲ್ಲಿ ತುಂಗೆ ಅಲೆಯ ನಾಟ್ಯವ
ಅವಳ ಛಲವೇ ಕಿತ್ತೂರಿನ ಮಹಿಮೆ
ಅವಳ ಸೊಬಗೇ ಬೇಲೂರಿನ ಪ್ರತಿಮೆ
ಎಲ್ಲೆಡೆ ಆ ರೂಪವೆ ಮನೆಬೆಳಗುವ ಆ ದೀಪವೆ
ಶೀಲ ಅವಳ ಆಭರಣ ಪ್ರೀತಿ ಅವಳ ಸಿ೦ಧೂರ
ತ್ಯಾಗ ಅವಳ ಉಸಿರಂತೆ ಅವಳೇ ಬಾಳ ಆಧಾರ
ತಾಯಿ ತ೦ಗಿ ಮನದನ್ನೆಯು ಅವಳೆ
ಮಮತೆ ಕರುಣೆ ಪ್ರತಿಬಿಂಬವು ಅವಳೆ
ಅವಳಿಗೆ ಆರಾಧನೆ ಈ ಹೃದಯದ ಔಪಾಸನೆ
ಕನ್ನಡಮ್ಮನ ದೇವಾಲಯ ಕಂಡೆ ಹೆಣ್ಣಿನ ಕಂಗಳಲಿ
ಕನ್ನಡ ನಾಡಿನ ಚರಿತೆಯನೇ ಕಂಡೆ ಆಕೆಯ ಹೃದಯದಲಿ
ವಂದನೆ ಆ ಹೆಣ್ಣಿಗೆ, ಅಭಿನಂದನೆ ಆ ಕಣ್ಣಿಗೆ
ಚಿತ್ರ: ಬ್ರಹ್ಮಾಸ್ತ್ರ
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ಸತ್ಯಂ
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ
ಕನ್ನಡ ನಾಡಿನ ಚರಿತೆಯನೇ ಕಂಡೆ ಆಕೆಯ ಹೃದಯದಲಿ
ವಂದನೆ ಆ ಹೆಣ್ಣಿಗೆ, ಅಭಿನಂದನೆ ಆ ಕಣ್ಣಿಗೆ
ಕಂಡೆ ಅವಳ ಮಾತಿನಲ್ಲಿ ಶಾರದಾಂಬೆ ವೀಣೆಯ
ಅವಳ ನಡೆಯ ಲಾಸ್ಯದಲ್ಲಿ ತುಂಗೆ ಅಲೆಯ ನಾಟ್ಯವ
ಅವಳ ಛಲವೇ ಕಿತ್ತೂರಿನ ಮಹಿಮೆ
ಅವಳ ಸೊಬಗೇ ಬೇಲೂರಿನ ಪ್ರತಿಮೆ
ಎಲ್ಲೆಡೆ ಆ ರೂಪವೆ ಮನೆಬೆಳಗುವ ಆ ದೀಪವೆ
ಶೀಲ ಅವಳ ಆಭರಣ ಪ್ರೀತಿ ಅವಳ ಸಿ೦ಧೂರ
ತ್ಯಾಗ ಅವಳ ಉಸಿರಂತೆ ಅವಳೇ ಬಾಳ ಆಧಾರ
ತಾಯಿ ತ೦ಗಿ ಮನದನ್ನೆಯು ಅವಳೆ
ಮಮತೆ ಕರುಣೆ ಪ್ರತಿಬಿಂಬವು ಅವಳೆ
ಅವಳಿಗೆ ಆರಾಧನೆ ಈ ಹೃದಯದ ಔಪಾಸನೆ
ಕನ್ನಡಮ್ಮನ ದೇವಾಲಯ ಕಂಡೆ ಹೆಣ್ಣಿನ ಕಂಗಳಲಿ
ಕನ್ನಡ ನಾಡಿನ ಚರಿತೆಯನೇ ಕಂಡೆ ಆಕೆಯ ಹೃದಯದಲಿ
ವಂದನೆ ಆ ಹೆಣ್ಣಿಗೆ, ಅಭಿನಂದನೆ ಆ ಕಣ್ಣಿಗೆ
ಚಿತ್ರ: ಬ್ರಹ್ಮಾಸ್ತ್ರ
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ಸತ್ಯಂ
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ
Tag: Kannadammana Devalaya kande hennina kangalali
ಕಾಮೆಂಟ್‌ಗಳು