ಮಾತಿನ ವಯ್ಯಾರಕ್ಕೆ ನಾಚಿಕೊಂಡಿತು ಮೌನ
ಮಾತಿನ
ವಯ್ಯಾರಕ್ಕೆ ನಾಚಿಕೊಂಡಿತು ಮೌನ
‘ನೀನು ಮಾತೇ ಆಡುವುದಿಲ್ಲ’ ಎಂದು ಮುನಿಸಿಕೊಂಡಿತು ಗಾಳಿ
ಹೂವಿಗೆ
ನಗು ಬಂತು ‘ಮಾತಿನಲಿ ಮುಳುಗಿದರೆ ಅರಳುವುದು
ಯಾವಾಗ?’
‘ಹೌದು, ಹೌದು, ಬೇಡ ಬಿಡು ಮಾತು,
ಅರಳಿದರೇ ಸಾಕು ನೀನು’
ಶಿರದ
ಮೇಲಿರಿಸಿ ಪರಿಮಳವ,
ಹಾರಿ ಹೋಯಿತು ಗಾಳಿ
ರಸಾತಳದಲಿ
ಮಲಗಿದ ಒಂದು ಪದ,
ಅರ್ಥವಿಲ್ಲದೆ ನಕ್ಕಿತು
ಈ
ನಗೆಯುಕ್ಕಿ ಭೋರ್ಗರೆದು ಸಾಗರದ ಎಡೆ ಕಂಪಿಸಿತು
ಅಲೆ-ಅಲೆಗಳೆಲ್ಲಾ
ಹೊಯ್ದಾಡಿ ತಳದ ಮುತ್ತುಗಳು ಹೊಳೆ ಹೊಳೆದು
ಕಡಲ
ತೀರದಲಿ ಕಿಕ್ಕಿರಿದ ಮಾತುಗಳು ಬಿಚ್ಚಿ ಬಾಯಿ ಬಿಗಿದವು.
ದಟ್ಟಡವಿಯ
ನಡುವೆ ‘ಧೋ’ ಎಂದು ಸುರಿವ ಮಳೆ
ಕಾಡುವಾಸನೆ
ಹಬ್ಬಿ,
ಮರಮರ ಬಳ್ಳಿಗಳೆಲ್ಲ ಮಜ್ಜನಕೆ ಮೈದೆರೆದು
ಗೂಡ....
ಗೂಡುಗಳಲ್ಲಿ ಹಾಡು ಮರೆತ ಹಕ್ಕಿಗಳ ಮೌನಧ್ಯಾನ
ಸುಮ್ಮನಿರು
ಮರೀ,
ಮಳೆಯ ಮಾರುಗಳನ್ನು ಕೇಳು’ ಎನ್ನುವ ಗಿಳಿತಾಯಿ
ನಟ್ಟನಡುರಾತ್ರಿಯಲಿ, ಸ್ವಪ್ನನೌಕೆಯಲಿ ತೇಲಿ ಮಲಗಿದೆ ಲೋಕ
‘ಓಂ ಶಾಂತಿ, ಓಂ ಶಾಂತಿ’ ಗರ್ಭಸ್ಥ
ಮೌನದ ಮಂತ್ರ ಜಪಿಸುತ್ತ
ಗಿರಿ
ವನ ಗುಡಿ ಗುಹ್ವರಗಲೆಲ್ಲೀ ದಿವ್ಯದಲಿ ಮೀಯುತ್ತ
ಮಾತು
ಮರೆತ ಜ್ಯೋತಿರ್ಲಿಂಗಕ್ಕೆ ಕರ್ಪೂರದಾರತಿಯನ್ನೆತ್ತಿವೆ
ಶಬ್ದಗಳ
ಸಂತೆಯಲಿ ಕಳೆದುಹೋಗಿದೆ ಮೂಕ ಮಗು
ಅತ್ತತ್ತು
ಮುಖ ಬಾಡಿ,
ಮೈಯೆಲ್ಲಾ ಧೂಳು ಧೂಳು
ಕಂಡ
ಕಂಡವರೆದುರು ಕೈ ಚಾಚಿ,
ಸುಸ್ತಾಗಿ ಮಲಗಿಬಿಟ್ಟಿದೆ ಅಲ್ಲಿ
ಮರದಡಿಯಲ್ಲಿ
ಮಾತು
ಮಾರುವ - ಮಾತು ಕೊಳ್ಳುವ ಸಡಗರದ ಸಂತೆಯಲಿ
ಮರೆತಿದ್ದಾಳೆ
ಮಾತೇ
‘ಅಮ್ಮಾ, ನಾನಾಚೆ ಬಂದ ಮೇಲೆ, ಮಾತಾಡಲೇ
ಬೇಕೇನಮ್ಮಾ?’
ಇಲ್ಲಿ, ನಿನ್ನೊಡಲ ಶಾಂತಸಾಗರದಲ್ಲಿ ಎಂಥ ಸವರ್ಗ ಮೌನ?
ಹಾಯಾಗಿರುವೆ, ಕರುಳಬಳ್ಳಿಯ ಸೇತುಬಂಧದಲಿ ಜೀಕುತ್ತ
ನನ್ನ
ಪಾಡಿಗೆ ನಾನಿರುವೆ ನಗು ನಗುತ,
ದೂಡದಿರೆನ್ನ ಮಾತುಗಳ
ಪಾಪಕೂಪಕ್ಕೆ
ಇಲ್ಲಿಂದಳೆ
ಕೈ ಮುಗಿವೆ,
ನಿಶ್ಯಬ್ಧ ಗರ್ಭಗುಡಿಯಲ್ಲಿ ಮಾತಿನ
ಸೂತಕವಿರದೇ
ಸುಖವಾಗಿಲ್ಲವೇನಮ್ಮಾ
ನಾನೂ –ನೀನೂ?’
ಸಾಹಿತ್ಯ: ಶಶಿಕಲಾ ವೀರಯ್ಯ ಸ್ವಾಮಿ
Tag: Maatina vaiyarakke naachikonditu mouna
ಕಾಮೆಂಟ್‌ಗಳು