ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಿವನು ಭಿಕ್ಷಕೆ ಬಂದ

ಶಿವನು ಭಿಕ್ಷಕೆ ಬಂದ


ಶಿವನು ಭಿಕ್ಷಕೆ ಬಂದ ನೀಡು ಬಾರೇ ತಂಗಿ
ಇವನಂಥ ಚೆಲ್ವರಿಲ್ಲ ನೋಡು ಬಾರೇ
ಇವನಂಥ ಚೆಲ್ವರಿಲ್ಲ ನೋಡು ಬಾರೇ

ಒಂದೇ ಕೈಲಾಜನಕ್ಕ ಕೋಲಕಾಣೆ
ಬೆನ್ಹಿಂದೆ ಕಟ್ಟಿರುವಂತೆ ಶೂಲಕಾಣೆ
ನಂದೀಯ ಕೋಲು ಪತಾಕೆಕಾಣೆ
ಮತ್ತೊಂದೊಂದು ಪಾದದಾ ಶೌರ್ಯಕಾಣೆ

ಮೈಯೆಲ್ಲಾ ಹಾವಿನ ಮೊತ್ತಕಾಣೆ
ಕಲಗ ಕೈಯಲ್ಲಿ ಹಿಡಿದ ನಾಗರಬೆತ್ತಕಾಣೆ
ವೈಯಾರ ಮೂರುಲೋಕ ಕರ್ತಕಾಣೆ
ತಕ್ಕ ತೈಯಾ ತೈಯಾನಂದಕ್ಕಕಾಣೆ

ಮನೆ ಮನೆಡಪ್ಪಲಿ ದಿಮ್ಮಿಕಾಲೆ
ಆತ ಹಣವನ್ನು ಕೊಟ್ರೂ ಒಲ್ಲನಂತೆಕಾಣೆ
ತನಿವಣ್ಣನಿಡಬೇಕಂತೆಕಾಣೆ
ಗೌರಿ ಮನಸಾ ಬಿಟ್ಟಿರಲಾರನಂತೆಕಾಣೆ

ಸಾಹಿತ್ಯ: ಜಾನಪದ

Tag: Shivanu bhikshake banda, shivanu bikshake banda

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ