ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಂಥಾ ಲೋಕವಯ್ಯಾ

ಎಂಥಾ ಲೋಕವಯ್ಯಾ
ಇದು ಎಂಥಾ ಲೋಕವಯ್ಯಾ
ಹೊಸತನವ ಕೊಡುವ ಹೊಸ ವಿಷಯ ಅರಿವ
ಬಯಕೆತರುವ ಇದು ಎಂಥಾ ಲೋಕವಯ್ಯ
ಇದು ಎಂಥಾ ಲೋಕವಯ್ಯ

ಕಡಲಲ್ಲಿ ಧುಮುಕಿ ಹೋರಾಡುವಾ
ಮುಗಿಲೇರಿ ಮೇಲೆ ತೇಲಾಡುವಾ
ಆ ಚಂದ್ರನೆಡೆಗೆ ಹಾರಾಡುವಾ
ಗ್ರಹತಾರೆಗಳಿಗೆ ಕೈ ಚಾಚುವಾ
ಜನರಿಂದ ತುಂಬಿ ಮೆರೆವಾ
ಇದು ಎಂಥಾ ಲೋಕವಯ್ಯ

ಬಡತನದ ಜೊತೆಗೆ ಬಡಿದಾಡುವಾ
ಸುಖವನ್ನು ಅರಸಿ ಅಲೆದಾಡುವಾ
ಹೊಸದನ್ನು ದಿನವು ಹುಡುಕಾಡುವಾ
ಛಲವನ್ನು ಬಿಡದೆ ಸೆಣಸಾಡುವಾ
ಜನರಿಂದ ತುಂಬಿ ಮೆರೆವಾ
ಇದು ಎಂಥಾ ಲೋಕವಯ್ಯ
ಹೊಸತನವ ಕೊಡುವ ಹೊಸ ವಿಷಯ ಅರಿವ
ಬಯಕೆತರುವ ಇದು ಎಂಥಾ ಲೋಕವಯ್ಯ

ಚಿತ್ರ: ನಾರದ ವಿಜಯ
ರಚನೆ: ಚಿ. ಉದಯಶಂಕರ್
ಗಾಯನ: ಕೆ. ಜೆ. ಏಸುದಾಸ್
ಸಂಗೀತ: ಸಿ ಅಶ್ವಥ್  ಮತ್ತು  ವೈದ್ಯನಾಥನ್


Tag: Enta lokavayya, Enthaa Lokavayya, Entha lokavayya

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ