ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮೊದಲು ಮಾನವನಾಗು


ಓದಿ ಬ್ರಾಹ್ಮಣನಾಗು
ಕಾದಿ ಕ್ಷತ್ರಿಯನಾಗು
ಶೂದ್ರ ವೈಶ್ಯನೆ ಆಗು
ದುಡಿದು ಗಳಿಸಿ
ಏನಾದರೂ ಆಗು
ನಿನ್ನೊಲವಿನಂತಾಗು
ಏನಾದರೂ ಸರಿಯೆ
ಮೊದಲು ಮಾನವನಾಗು

ಹಿಂದು ಮುಸ್ಲಿಮನಾಗು
ಬೌದ್ಧ ಕ್ರೈಸ್ತನೆ ಆಗು
ಚಾರ್ವಾಕನೇ ಆಗು
ಭೋಗ ಬಯಸಿ
ಏನಾದರೂ ಆಗು
ಹಾರೈಸಿದಂತಾಗು
ಏನಾದರೂ ಸರಿಯೆ
ಮೊದಲು ಮಾನವನಾಗು

ರಾಜಕಾರಣಿಯಾಗು
ರಾಷ್ಟ್ರಭಕ್ತನೆ ಆಗು
ಕಲೆಗಾರ ವಿಜ್ಞಾನಿ ವ್ಯಾಪಾರಿಯಾಗು
ಏನಾದರೂ ಆಗು
ನೀ ಬಯಸಿದಂತಾಗು
ಏನಾದರೂ ಸರಿಯೇ

ಮೊದಲು ಮಾನವನಾಗು

ಸಾಹಿತ್ಯ:  ಡಾ. ಸಿದ್ದಯ್ಯ ಪುರಾಣಿಕ


Tag: Modalu Manavanagu

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ