ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚಂದ್ರಚೂಡ ಶಿವಶಂಕರ ಪಾರ್ವತಿ



ಚಂದ್ರಚೂಡ ಶಿವ ಶಂಕರ ಪಾರ್ವತಿ

ರಮಣನೆ ನಿನಗೆ ನಮೋ ನಮೋ
ಸುಂದರ ಮೃಗಧರ ಪಿನಾಕ ಧನುಕರ
ಗಂಗಾಶಿರ ಗಜಚರ್ಮಾಂಬರಧರ ನೀನೆ

ನಂದಿ ವಾಹನ ಆನಂದದಿಂದ
ಮೂರ್ಜಗದಿ ಮೆರೆವನು ನೀನೆ
ಅಂದು ಅಮೃತ ಘಟದಿಂದುದಿಸಿದ
ವಿಷ ತಂದು ಭುಜಿಸಿದವನು ನೀನೆ

ಕಂದರ್ಪನ ಕ್ರೋಧದಿಂದ ಕಣ್ತೆರದು
ಕೊಂದ ಉಗ್ರನು ನೀನೆ
ಇಂದಿರೇಶ ಶ್ರೀ ರಾಮನ ಪಾದವ
ಚಂದದಿ ಪೊಗಳುವನು ನೀನೆ

ಬಾಲ ಮೃಕಂಡನ ಕಾಲನು ಎಳೆವಾಗ
ಪಾಲಿಸಿದವನು ನೀನೆ
ಕಾಲಕೂಟ ವಿಷವ ಪಾನ ಮಾಡಿದ
ನೀಲಕಂಠ ನೀನೆ

ವಾಲಯದಿ ಕಪಾಲವ ಪಿಡಿದು
ಭಿಕ್ಷೆ ಬೇಡೋ ದಿಗಂಬರನು ನೀನೆ
ಜಾಲ ಮಾಡುವ ಗೋಪಾಲನೆಂಬ
ಪೆಣ್ಣಿಗೆ ಮರುಳಾದವನು ನೀನೆ

ಧರೆಗೆ ದಕ್ಷಿಣ ಕಾವೇರಿ ತೀರ
ಕುಂಭಾಪುರ ನಿವಾಸನು ನೀನೆ
ಕರದಲಿ ವೀಣೆಯ ಗಾನವ ಮಾಡುವ
ನಮ್ಮ ಉರಗ ಭೂಷಣನು ನೀನೆ

ಕೊರಳಲಿ ಭಸ್ಮ ರುದ್ರಾಕ್ಷಿ ಮಾಲೆ
ಧರಿಸಿದ ಪರಮ ವೈಷ್ಣವ ನೀನೇ.
ಗರುಡಗಮನ ಶ್ರೀ ಪುರಂದರವಿಠ್ಠಲನ
ಪ್ರಾಣಪ್ರಿಯನು ನೀನೆ




ಸಾಹಿತ್ಯ: ಪುರಂದರದಾಸರು

Photo Courtesy: NarasimhaAssociates.com

Tag: Chandrachuda shiva shankara parvati

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ