ನಿನ್ನೊಲುಮೆಯಿಂದಲೇ
ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು
ಚಂದ್ರಮುಖಿ ನೀನೆನಲು ತಪ್ಪೇನೇ?
ನಿನ್ನ ಸೌಜನ್ಯವೇ ದಾರಿ ನೆಳಲಾಗಿರಲು
ನಿತ್ಯಸುಖಿ ನೀನೆನಲು ಒಪ್ಪೇನೇ?
ನಿನ್ನ ನಗೆಮಲ್ಲಿಗೆಯ ಪರಿಮಳದ ಪಾತ್ರೆಯಲಿ
ಚೆಲ್ಲಿ ಸೂಸುವ ಅಮೃತ ನೀನೇನೇ
ನನ್ನ ಕನಸುಗಳೆಲ್ಲಾ ಕೈಗೊಳುವಾ ಯಾತ್ರೆಯಲಿ
ಸಿದ್ದಿಸುವ ಧನ್ಯತೆಯು ನೀನೇನೇ
ನಿನ್ನಕಿರುನಗೆಯಿಂದ ನಗೆಯಿಂದ ನುಡಿಯಿಂದ
ಎತ್ತರದ ಮನೆ ನನ್ನ ಬದುಕೇನೇ
ಚಂದ್ರನಲಿ ಚಿತ್ರಿಸಿದ ಚೆಲುವಿನೊಳಗುಡಿಯಿಂದ
ಗಂಗೆ ಬಂದಳು ಇದ್ದ ಕಡೆಗೇನೇ
ಸಾಹಿತ್ಯ: ಕೆ. ಎಸ್. ನರಸಿಂಹ ಸ್ವಾಮಿ
Tag: Ninnolumeyindale baalu belakaagiralu
Tag: Ninnolumeyindale baalu belakaagiralu
ಕಾಮೆಂಟ್‌ಗಳು