ತಿರುಪ್ಪಾವೈ10
ತಿರುಪ್ಪಾವೈ
ಆ ಕುಂಭಕರ್ಣನು ತನ್ನ ನಿದ್ರೆಯನ್ನು ನಿನಗೆ ಧಾರೆ ಎರೆದಿದ್ದಾನೆಯೆ?
Thiruppavai 10
ನೋಟ್ರುಕ್ ಶುವರ್ಕ್ಕುಂ ಪುಗುಗಿನ್ರ ಅಮ್ಮನಾಯ್
ಮಾಟ್ರಮುಂ ತಾರಾರೋ ವಾಶಲ್ ತಿರುವಾದಾರ್
ನಾಟ್ರ ತುಳಾಯ್ಮುಡಿ ನಾರಾಯಣನ್ ನಮ್ಮಾಲ್
ಪೋಟ್ರ ಪರೈ ತರುಮ್ ಪುಣ್ಣಿಯನಾಳ್ ಪಣ್ಡೊರುನಾಳ್
ಕೂಟ್ರತ್ತಿನ್ ವಾಯ್‍ವೀಳ್‍ನ್ದ ಕುಂಭಕರುಣನುಂ
ತೋಟ್ರುಮ್ ಊನಕ್ಕೇ ಪೆರುಂತುಯಿಲ್ ತಾನ್ ತಂದಾನೋ
ಆಟ್ರಮ್ ಅನಂದಲ್ ಉರೈಯಯ್ ಅರುಂಗಲಮೇ
ತೇಟ್ರಮಾಯ್ ವಂದು ತಿರವೇಲೋರೆಂಬಾವಾಯ್
ಭಾವಾನುವಾದ - ೧೦
ದಿನದಶವಾಯ್ತು ನಿದ್ರೆ ಧಾರೆಯನೆರೆದಿಹನೇ ಕುಂಭಕರ್ಣನು ನಿನಗೆ?
ಮನದ ಬಾಗಿಲ ತೆರೆದೆದ್ದು ಬಾ ನುಡಿಮುತ್ತನಾಲಿಸೆಮಗೆ
ನೀನೆಮ್ಮ ಮವಧುಕುಲಕಲಂಕಾರ ತಾರೆ ತಾರಾಮಂಡಲಕೆ ತಾರೆ
ಸುಜ್ಞಾನ ವಾರಿಧಿಯೇ ನಡೆಸೆಮ್ಮನೊಲವಿಂದ ಅಚ್ಯುತನ ಸನ್ನಿಧಿಗೆ
ಯೋಗಿಜನ ಹೃತ್ಕಮಲವಾಸ ಸಪ್ತಾದ್ರಿವಾಸನೈದಿಹನು ನಿನಗಾಗಿ
ನಿನ್ನ ನಲ್ನುಡಿಯ ಮೆಚ್ಚಿ ನೋಂಪಿಯ ವರವೀಯಲೈದಿಹನು
ಗೀತಗೋವಿಂದ ನಂದನಂದನ ತಾನೊಲಿವ ನೀನಿರಲು ನಮ್ಮೊಡನೆ ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತೆಲ್ಲೆಡೆಮಂಗಳದ ಮುಂಬೆಳಕು
ಭಾವಾರ್ಥ 10
ಈ ಸಖಿಯಾದರೋ ಶ್ರೀಕೃಷ್ಣ ತನ್ನನ್ನು ಹುಡುಕಿಕೊಂಡು ಬಂದೇ ಬರುತ್ತಾನೆ. ಎಂಬ ಆತ್ಮವಿಶ್ವಾಸವನ್ನು ಉಳ್ಳವಳು. ಇಂತಹ ಭಕ್ತಶ್ರೇಷ್ಠಳು ಜೊತೆಗಿದ್ದರೆ ಸುಲಭವಾಗಿ ಕೃಷ್ಣ ಸಿಗುತ್ತಾನೆಂದು ಎಬ್ಬಿಸುತ್ತಿದ್ದಾಳೆ.
ಓ ಸಖಿ ಕುಂಭಕರ್ಣನು ರಾಮಬಾಣಕ್ಕೆ ತುತ್ತಾಗುವಾಗ ತನ್ನ ನಿದ್ರೆಯನ್ನು ನಿನಗೆ ಧಾರೆ ಎರೆದಿದ್ದಾನೆಯೆ? ಅಂದರೆ ಕುಂಭಕರ್ಣನು ಮಹಾಭಾಗವತ, ಸಾವು ಆತನನ್ನು ಅಪ್ಪಲಿಲ್ಲ. ಅಣ್ಣನು ಬುದ್ದಿಮಾತನ್ನು ಕೇಳದಿದ್ದಾಗ ತಾನೇ ಮುಂದಾಗಿ ಯುದ್ಧಕ್ಕೆ ಹೋಗಿ ರಾಮ ಬಾಣಕ್ಕೆ ತನ್ನನ್ನು ತಾನು ಅರ್ಪಿಸಿಕೊಂಡವನು. ವಿಭೀಷಣನು ಅಣ್ಣನ ಪಕ್ಷವನ್ನು ತೊರೆದು ಶತ್ರುಪಕ್ಷಕ್ಕೆ ಸೇರಿದ್ದು ಧರ್ಮವಲ್ಲ, ಧರ್ಮಕ್ಕಾಗಿ ಪ್ರಾಣವನ್ನೂ ಲೆಕ್ಕಿಸಬಾರದು ಎಂದು ಭಾವಿಸಿದವನು ಕುಂಭಕರ್ಣ. ಅಣ್ಣನಿಗೂ ದ್ರೋಹಮಾಡದೇ ಅಂತರಾತ್ಮನಿಗೂ ದ್ರೋಹ ಮಾಡದೇ ಸಾಯುವುದೇ ಮೇಲೆಂದು ನಿಶ್ಚಯಿಸಿ ರಾಮಬಾಣಕ್ಕೆ ತುತ್ತಾದವನು. ಅಂತಹ ಭಾಗವತನಾದ ಕುಂಭಕರ್ಣನು ತನ್ನ ನಿದ್ರೆಯನ್ನು ನಿನಗೆ ಬಿಟ್ಟುಹೋದನೆ ಎಂದು ಒಲವ ಸಿಟ್ಟಿನಲ್ಲಿ ಕೇಳುತ್ತಾಳೆ. ನೀನು ಹೀಗೆ ನಿದ್ರೆಯ ನಟನೆ ಮಾಡಿದರೆ ನಮಗೆ ಮಾರ್ಗದರ್ಶನ ನೀಡುವವರಾರು? ನೀನು ಮಹಾ ಯೋಗಿನಿ, ಭಾಗವತೋತ್ತಮಳು. ನಮ್ಮ ಸ್ತ್ರೀ ಸಮುದಾಯಕ್ಕೆ ಅಲಂಕಾರಪ್ರಿಯಳಾದವಳು.
ನೋಡು ನೀನು ಪರಿಪರಿಯಲ್ಲಿ ಗೋವಿಂದನನ್ನು ವರ್ಣಿಸುವ ಪರಿಯನ್ನು ಕಂಡುಕೇಳಿ ಆನಂದಿಸಿ ವರಗಳನ್ನು ಕೊಡಲೆಂದೇ ಬಂದಿದ್ದಾನೆ ಯದುಶೈಲನಾಥ.
ನೀನು ಸುಜ್ಞಾನಮೂರುತಿ, ಜ್ಞಾನವಾರಿಧಿ, ಜ್ಯೋತಿರಾತ್ಮಳು ನಿನ್ನ ನಿಜಭಕ್ತಿಜ್ಞಾನ ದೀವಿಗೆಯಿಂದ ರಾಮಾನುಜ ವರದಾಂಕಿತನಾದ ಶ್ರೀರಂಗನಾಥನ ದರ್ಶನಭಾಗ್ಯವನ್ನು ಮಾಡಿಸಲು ನೀನು ಸಮರ್ಥಳು.
ಆದ್ದರಿಂದ ನಿದ್ರೆಯ ನಟನೆ ಸಾಕುಮಾಡು. ಬೇಗೆದ್ದು ಬಾ. ನಮಗೆ ಮಾರ್ಗದರ್ಶನ ನೀಡು.
ಇದರಿಂದ ನಮ್ಮವ್ರತವು ಈಡೇರಿ, ಸಮಸ್ತಲೋಕಕ್ಕೂ ಮಂಗಳ ಉಂಟಾಗಲಿ.
ಕೃಪೆ: ದಾಸಗೋಪಾಲ ಕಾವ್ಯನಾಮದ ಅರ್ಚಕ ವೇಣುಗೋಪಾಲ್ ಬಿ. ಎಸ್ ಅವರ ಶ್ರೀಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೈ ಗೀತಮಾಲೆ
ಕಾಮೆಂಟ್‌ಗಳು