ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾ ಅಮ್ಮಾ ಎಂದಾಗ

ಅಮ್ಮಾ ಅಮ್ಮಾ ಅಮ್ಮಾ ನನ್ನಮ್ಮಾ
ನಾ ಅಮ್ಮಾ ಎಂದಾಗ ಏನೋ ಸಂತೋಷವು
ನಿನ್ನ ಕಂಡಾಗ ಮನಕೇನೊ ಆನಂದವು
ಅಮ್ಮಾ ಅಮ್ಮಾ ಅಮ್ಮಾ ನನ್ನಮ್ಮಾ

ಹಾಲಿನ ಸುಧೆಯು ನಿನ್ನಯ ಮನಸು
ಜೇನಿನ ಸವಿಯೂ ನಿನ್ನ ಮಾತು
ಪುಣ್ಯದ ಫಲವೋ ದೇವರ ವರವೋ
ಸೇವೆಯ ಭಾಗ್ಯಾ ನನ್ನದಾಯ್ತು
ಅಮ್ಮಾ ಅಮ್ಮಾ ಅಮ್ಮಾ ನನ್ನಮ್ಮಾ

ತಾಯಿಯ  ಮಮತೆ ಕಂಡಾ ದೇವನು
ಅಡಗಿಹ ಎಲ್ಲೋ ಮರೆಯಾಗಿ
ತಾಯಿಯ ಶಾಂತಿಗೆ ಧರಣಿಯು ನಾಚಿ
ಮೌನದಿ ನಿಂತಳು ತಲೆ ಬಾಗಿ
ಅಮ್ಮಾ ಅಮ್ಮಾ ಅಮ್ಮಾ ನನ್ನಮ್ಮ

ಚಿತ್ರ: ಭಲೇ ಜೋಡಿ
ಸಂಗೀತ: ಆರ್. ರತ್ನ
ಗಾಯನ: ಪಿ. ಬಿ. ಶ್ರೀನಿವಾಸ್
Tag: Naa ammaa endaaga enu santoshavu, Na amma endaga enu santoshavu

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ