ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಂದಾರ ಪುಷ್ಪವು ನೀನು

ಮಂದಾರ ಪುಷ್ಪವು ನೀನು
ಸಿಂಧೂರ ಪ್ರತಿಮೆಯು ನೀನು
ಗಂಧರ್ವ ಗಾನ ವಾಣಿ
ರಾಣಿ ರಾಣಿ ರಾಣಿ ರಾಣಿ ರಾಣಿ
ಎಂದೋ ಮೆಚ್ಚಿದೆ ನಾನು
ನಿನ್ನ ಎಂದೊ ಮೆಚ್ಚಿದೆ ನಾನು

ಮುಂಜಾನೆ ಹೊನ್ನಿನ ಕಿರಣ
ಮುತ್ತಿಟ್ಟ ತಾವರೆ ವದನ
ರಾಣೀ, ರಾಣೀ,
ನಿನ್ನ ಚಿಂಕೆ ಕಣ್ಣ ಜಿಗಿದಾಟದಲಿ
ತೂರಾಡಿ ತೂಗಿ ಹೋದೆ
ರಾಣಿ ರಾಣಿ ರಾಣಿ ರಾಣಿ ರಾಣಿ
ಎಂದೋ ಮೆಚ್ಚಿದೆ ನಾನು

ಜೇನಲ್ಲಿ ನಿಂದಿಹ ಮಲ್ಲೆ
ಮಿಂಚಲ್ಲಿ ಮೂಡಿದ ನಲ್ಲೆ
ರಾಣೀ, ರಾಣೀ,
ನಿನ್ನ ಪ್ರೀತಿ ಸವಿಯ ಸಲ್ಲಾಪದಲಿ
ಮರುಳಾಗಿ ಮೌನವಾದೆ
ರಾಣಿ ರಾಣಿ ರಾಣಿ ರಾಣಿ ರಾಣಿ
ಎಂದೋ ಮೆಚ್ಚಿದೆ ನಾನು

ಚಿತ್ರ: ರಂಗನಾಯಕಿ
ಸಾಹಿತ್ಯ: ವಿಜಯನಾರಸಿಂಹ
ಸಂಗೀತ: ಎಂ. ರಂಗರಾವ್
ಗಾಯನ: ಪಿ. ಜಯಚಂದ್ರನ್ ಮತ್ತು ಎಸ್. ಪಿ. ಶೈಲಜಾ


Tag: Mandara Pushpavu neenu, Mandaara pushpavu neenu

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ