ವಂದೇ ಮಾತರಂ ದಿನಾಚರಣೆ
ವಂದೇ ಮಾತರಂ ದಿನಾಚರಣೆ
ಸೆಪ್ಟೆಂಬರ್ 7 ಭಾರತ ಮಾತೆಯ ಮಹಾನ್ ಪುತ್ರರಾದ ಬಂಕಿಮ ಚಂದ್ರರು 'ವಂದೇ ಮಾತರಂ' ಗೀತೆಯನ್ನು ಸೃಜಿಸಿದ ದಿನ.
ಬಂಕಿಮ ಚಂದ್ರ ಚಟರ್ಜಿಯವರು ಒಮ್ಮೆ ರೈಲಿನಲ್ಲಿ ಪ್ರಯಾಣಿಸುವಾಗ ತಾಯಿ ಭಾರತಿಯೊಡಲಿನ ನಿಸರ್ಗ ಸೌಂದರ್ಯಕ್ಕೆ ಮಾರುಹೋದರು. ಜೊತೆಜೊತೆಗೆ ಆಕೆಗೊದಗಿದ ದುರ್ಗತಿಯನ್ನೂ, ಅದಕ್ಕೆ ಪ್ರತಿಯಾಗಿ ಧೀರಭಾರತೀಯರ ಹೋರಾಟವನ್ನೂ ನೆನೆಯುತ್ತ ಸಾಗಿದರು. ಅದರ ಪರಿಣಾಮ, ರಾತ್ರಿಯ ನಿದ್ರೆಯಲ್ಲೂ ಅವೇ ಚಿತ್ರಣಗಳು. ಹೀಗೆ ಕನವರಿಕೆಯಲ್ಲಿ ಮೂಡಿಬಂದಿದ್ದು ‘ವಂದೇ ಮಾತರಂ’ ದಿವ್ಯಗೀತೆ!
ಬಂಕಿಮ ಚಂದ್ರರ ಸಂಬಂಧಿ ತರುಣನೊಬ್ಬ ಅವರು ಕನವರಿಸಿದ ಸಾಲುಗಳನ್ನು ಬರೆದುಕೊಂಡ. ಬಂಕಿಮ ಚಂದ್ರರು ಎಚ್ಚರವಾದ ಬಳಿಕ ಅವರಿಗೆ ಅವನ್ನು ತೋರಿಸಿದ. ಸಂಭ್ರಾಂತರಾದ ಬಂಕಿಮಚಂದ್ರರು ಅದಕ್ಕೆ ಅಂತಿಮ ಸ್ಪರ್ಷ ನೀಡಿದರು. ಮುಂದೆ ಅವರ ಜನಪ್ರಿಯ ಕೃತಿ ‘ಆನಂದಮಠ’ದಲ್ಲಿ ಈ ಗೀತೆ ರಣಮಂತ್ರವಾಗಿ ಹರಿಯಿತು.
ವಂದೇಮಾತರಂ
ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯ ಶಾಮಲಾಂ ಮಾತರಂ
ವಂದೇಮಾತರಂ
ಶುಭ್ರಜ್ಯೋತ್ಸ್ನಾ ಪುಲಕಿತ ಯಾಮೀನೀಂ
ಪುಲ್ಲಕುಸುಮಿತ ದ್ರುಮದಲ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಂ
ಕೋಟಿ ಕೋಟಿ ಕಂಠ ಕಲಕಲನಿನಾದ ಕರಾಲೇ
ಕೋಟಿ ಕೋಟಿ ಭಜೈಧರ್ತಖರ ಕರವಾಲೇ
ಅಬಲಾ ಕೆನೊ ಮಾ ಎತೊ ಬಲೇ ಬಹುಬಲಧಾರೀಣಿಂ
ನಮಾಮಿ ತಾರಿಣೀಂ ಮಾತರಂ
ತುಮಿ ವಿದ್ಯ ತುಮಿ ಧರ್ಮ
ತುಮಿ ಹ್ರದಿ ತುಮಿ ಮರ್ಮ ತ್ವಂ ಹಿ ಪ್ರಾಣಾ:
ಶರೀರೇ, ಬಾಹುತೇ ತುಮಿ ಮಾ ಭಕ್ತಿ
ತೋಮಾರ ಇ ಪ್ರತಿಮಾ ಗಡಿ ಮಂದಿರೇ ಮಂದಿರೇ
ತ್ವಂ ಹಿ ದುರ್ಗಾ ದಶಪ್ರಹರಣ ಧಾರೀಣೀಂ
ಕಮಲಾ ಕಮಲದಲ ವಿಹಾರಿಣೀ ವಾಣೀವಿದ್ಯಾಯಿನಿ
ನಮಾಮಿ ತ್ಯಾಂ ನಮಾಮಿ ಕಮಲಾಂ ಅಮಲಾಂ
ಆತುಲಾಂ ಸುಜಲಾಂ ಸುಫಲಾಂ ಮಾತರಂ
ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ ಧರಣೀಂ ಮಾತರಂ
ವಂದೇಮಾತರಂ ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯ ಶಾಮಲಾಂ ಮಾತರಾಂ
ಈ ಮಹಾನ್ ಭಾರತ ಪುತ್ರ ಬಂಕಿಮ ಚಂದ್ರರಿಗೆ ನಮನ. ಆ ಮಾತೃ ಭಕ್ತಿ ದೇಶ ಭಕ್ತಿಗಳಿಗೆ ನಮನ. ಅಂತಹ ಭಕ್ತಿ ನಮ್ಮಲ್ಲೂ ಸ್ಪುರಿಸುವ ಹಾಗೆ ಮಾಡು ತಾಯಿ ಎಂಬ ಪ್ರಾರ್ಥನೆಯೊಂದಿಗೆ ತಾಯಿ ಭಾರತಿದೇವಿಯ ಪಾದಕ್ಕೆ ನಮ್ಮ ಸಾಷ್ಟಾಂಗ ನಮನ.
Vande Mataram Day
ಕಾಮೆಂಟ್‌ಗಳು