ಶಾಂತಿ ಮಂತ್ರ
ಶಾಂತಿ ಮಂತ್ರ
ದುರ್ಜನ ಸಜ್ಜನೋ ಭೂಯಾತ್ ಸಜ್ಜನಃ ಶಾಂತಿಮಾಪ್ನುಯಾತ್
ಶಾಂತೋ ಮುಚ್ಯೇತ ಬಂಧೇಭ್ಯೋ ಮುಕ್ತಚಾನ್ಯಾನ್ ವಿಮೋಚಯೇತ್
ದುರ್ಜನರು ಸಜ್ಜನರಾಗಲಿ; ಸಜ್ಜನರು ಶಾಂತಿಯನ್ನು ಪಡೆಯುವಂತಾಗಲಿ.
ಶಾಂತಿವಂತರು ಬಂಧನಗಳಿಂದ ಮುಕ್ತಿವಂತರಾಗಲಿ; ಮುಕ್ತಿವಂತರು ಇತರರನ್ನೂ ಬಿಡುಗಡೆಗೊಳಿಸುವಂತಾಗಲಿ.
ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಮ್ ನ್ಯಾಯೇನ ಮಾರ್ಗೇನ ಮಹೀಮ್ ಮಹೀಶಾಃ
ಗೋಬ್ರಾಹ್ಮಣೇಭ್ಯಃ ಶುಭಮಸ್ತುನಿತ್ಯಂ ಲೋಕಾಃ ಸಮಸ್ತಾಃ ಸುಖಿನೋ ಭವಂತು.
ಪ್ರಜಾಪಾಲಕರಿಗೆ ಒಳಿತಾಗಲಿ. ಆಳುವವರು ನ್ಯಾಯಮಾರ್ಗದಲ್ಲಿ ಆಳಲಿ
ಪಶುಗಳು ಮತ್ತು ಪ್ರಾಜ್ಞರು ನಿತ್ಯಶುಭವನ್ನು ಕಾಣಲಿ, ಲೋಕದ ಸಮಸ್ತರೂ ಸುಖವಂತರಾಗಲಿ.
ಕಾಲೇ ವರ್ಷಂತು ಪರ್ಜನ್ಯಃ ಪೃಥುವೀ ಸಸ್ಯಶಾಲಿನೀಂ
ದೇಶೋಯಂ ಕ್ಷೋಭರಹಿತೋ ಬ್ರಾಹ್ಮಣಾಃ ಸಂತು ನಿರ್ಭಯಾಃ
ಕಾಲ ಕಾಲಕ್ಕೆ ಮೇಘಗಳು ಮಳೆ ಸುರಿಸಲಿ, ಭೂತಾಯಿಯು ಹಸುರಿನಿಂದ ಕಂಗೊಳಿಸುತ್ತಿರಲಿ
ದೇಶದಲ್ಲಿ ಗಲಭೆಗಳು ಇಲ್ಲದಂತಿರಲಿ; ಪ್ರಾಜ್ಞರು ಭಯವಿಲ್ಲದಂತೆ ಬದುಕುವಂತಾಗಲಿ.
ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿಃದುಃಖಭಾಗ್ಭವೇತ್
ಎಲ್ಲರೂ ಸುಖಿಗಳಾಗಲಿ; ಎಲ್ಲರೂ ಆರೋಗ್ಯವಂತರಾಗಲಿ
ಎಲ್ಲರೂ ಶುಭವನ್ನೇ ಕಾಣುವಂತಾಗಲಿ; ಯಾರೂ ದುಃಖಿತಾರಾಗದಿರಲಿ.
ಸರ್ವಸ್ತಾಸ್ತು ದುರ್ಗಾಣಿ ಸರ್ವೋ ಭದ್ರಾಣಿ ಪಶ್ಯತು
ಸರ್ವ ಕಾಮನವಾಪ್ನೋತು ಸರ್ವಃ ಸರ್ವತ್ರ ನಂದತು
ಸರ್ವರೂ ಕಷ್ಟಗಳನ್ನು ಮೀರುವಂತಾಗಲಿ; ಸರ್ವರೂ ಉತ್ತಮವಾದ ದೃಷ್ಟಿಯನ್ನೇ ಹೊಂದಿರಲಿ;
ಎಲ್ಲರ ಆಶಯಗಳೂ ಫಲಿಸಲಿ; ಎಲ್ಲರೂ ಎಲ್ಲೆಲ್ಲಿಯೂ ನಲಿಯುತ್ತಿರುವಂತಾಗಲಿ
ಸ್ವಸ್ತಿಮಾತ್ರಾ ಉತ ಪಿತ್ರೆ ಣೋ ಅಸ್ತು ಸ್ವಸ್ತಿಗೊಭ್ಯೋ ಜಗತೇ ಪುರುಷೇಭ್ಯಃ
ವಿಶ್ವಂ ಸುಭೂತಂ ಸುವಿದಾತ್ರಂ ಣೋ ಅಸ್ತು ಜ್ಯೋಗೇವ ದೃಶ್ಯೇಮ ಸೂರ್ಯಂ
ನಮ್ಮ ಮಾತಾಪಿತರಿಗೆ ಒಳ್ಳೆಯದಾಗಲಿ; ಈ ಜಗದಲ್ಲಿರುವ ಸಕಲ ಜೀವಿಗಳಿಗೂ ಒಳಿತಾಗಲಿ
ಈ ಜಗದಲ್ಲಿರುವ ಸಕಲವೂ ಒಳಿತಿನಿಂದ ವೃದ್ಧಿಸಲಿ; ಜಗತ್ತಿಗೇ ಜ್ಯೋತಿಯಾದ ಸೂರ್ಯನನ್ನು ನಾವು ಸುದೀರ್ಘ ಕಾಲ ಕಾಣುತ್ತಿರುವಂತಾಗಲಿ
Tag: Shanti Mantra
Tag: Shanti Mantra
ಕಾಮೆಂಟ್‌ಗಳು