ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಯಾಕೆ ನಿರ್ದಯನಾದೆಯೊ


ಯಾಕೆ ನಿರ್ದಯನಾದೆಯೊ ಹರಿಯೆ
ಶ್ರೀಕಾಂತ ಎನ್ನಮೇಲೆ ಎಳ್ಳಷ್ಟು ದಯವಿಲ್ಲ

ಕಂಗೆಟ್ಟು ಕಂಬದಲಿ ಒಡೆದು ಬಳಲಿ ಬಂದು
ಹಿಂಗದೆ ಪ್ರಹ್ಲಾದನ್ನ ಅಪ್ಪಿಕೊಂಡೆ
ಮಂಗಳಪದವಿತ್ತು ಆತನ ಸಲಹಿದೆ
ಬಂಗಾರ ಎಷ್ಟುಕೊಟ್ಟನೊ? ಪೇಳೋ ಹರಿಯೆ

ಸಿರಿದೇವಿಗೆ ಹೇಳದೆ ಸೆರಗು ಸಂಹರಿಸಿದೆ
ಗರುಡನ ಮೇಲೆ ಗಮನವಾದೆ
ಭರದಿಂದ ನೀಬಂದು ಕರಿಯನುದ್ಧರಿಸಿದೆ
ಕರಿರಾಜ ಏನು ಕೊಟ್ಟನೊ? ಪೇಳೋ ಹರಿಯೆ

ಅಜಾಮಿಳನು ಅಣ್ಣನೆ? ವಿಭೀಷಣನು ತಮ್ಮನೆ?
ನಿಜ ರುಕ್ಮಾಂಗದ ನಿನ್ನ ಮೊಮ್ಮಗನೆ?
ಅವರೆಲ್ಲ ಹಿತರೇನೊ?  ನಾನಿನಗೆ ಅಹಿತನೊ?
ನ್ಯಾಯವಲ್ಲವೊ ತಂದೆ, ಪುರಂದರ ವಿಠ್ಠಲ.

ಸಾಹಿತ್ಯ: ಪುರಂದರದಾಸರು


Tag: Yake Nirdayanadeyo

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ