ಚಂದ್ರನಾಥರ ನೆನಪುಗಳ ಚಿತ್ತಾರ
ಚಂದ್ರನಾಥರ ನೆನಪುಗಳ ಚಿತ್ತಾರ
`ರೇಖೆ ರೇಖೆಗಳ ನಡುವೆ ಕಲ್ಪನೆಯನ್ನು ಹೊಸೆದು, ವಿಶಿಷ್ಟ ಆಲೋಚನೆಗಳನ್ನು ಕಸಿ ಮಾಡುವವನೇ ಉತ್ತಮ ಕಲಾವಿದ` ಎಂದು ಹಿರಿಯ ಚಿತ್ರಕಲಾವಿದ ಕೆ.ಚಂದ್ರನಾಥ ಆಚಾರ್ಯ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ `ಮನೆಯಂಗಳದಲ್ಲಿ ಮಾತುಕತೆ` ಕಾರ್ಯಕ್ರಮದಲ್ಲಿ ತಮ್ಮ ಮನದಾಳದ ಅನಿಸಿಕೆಗಳನ್ನು ಹಂಚಿಕೊಂಡರು.
`ಸಾಹಿತ್ಯ ಕೃತಿಯನ್ನು ಮೀರಿ ಕಲಾವಿದನ ಕುಂಚದಲ್ಲಿ ಅರಳುವ ಸಾಂದರ್ಭಿಕ ಚಿತ್ರಗಳು ಓದುಗರನ್ನು ಹಿಡಿದಿಡಬೇಕು. ಈ ಚಿತ್ರಗಳನ್ನು ಒಂದೆಡೆ ಕೇಂದ್ರೀಕರಿಸಿ ಪ್ರದರ್ಶನ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾದಾಗ ಸಾಂದರ್ಭಿಕ ಚಿತ್ರ ಹಾಗೂ ಇತರೆ ಕಲಾಕೃತಿಗಳ ನಡುವೆ ಸೃಜನಶೀಲತೆಯ ಅಂತರ ಏರ್ಪಡುವುದಿಲ್ಲ` ಎಂದು ಅಭಿಪ್ರಾಯಪಟ್ಟರು.
`ಬಡತನದಲ್ಲಿ ಹುಟ್ಟಿದರೂ ಮನೆಯ ಸದಸ್ಯರೆಲ್ಲ ಕಲೆಯ ಆರಾಧಕರಾಗಿದ್ದರು. ತಂದೆ ಚಿನ್ನದ ಕೆಲಸ ಮಾಡುತ್ತಿದ್ದರು, ತಾತ ಕೂಡ ಕಲ್ಲಿನ ಕೆತ್ತನೆಗಳನ್ನು ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಚಿಕ್ಕವನಿದ್ದಾಗ ಅಮ್ಮ ಬರೆದುಕೊಡುತ್ತಿದ್ದ ಹಕ್ಕಿಗಳಿರುವ ಉದ್ಯಾನದ ಚಿತ್ರ ನನ್ನಲ್ಲಿ ಇಂದಿಗೂ ಹೊಸ ಬಗೆಯ ಹೊಳಹುಗಳನ್ನು ಸೃಷ್ಟಿಸುತ್ತದೆ. ಹಕ್ಕಿಯು ಚಂಚಲ ಮನಸ್ಸಿನ ಸಂಕೇತದಂತೆ ಭಾಸವಾಗುತ್ತದೆ` ಎಂದರು.
`ಹುಟ್ಟೂರು ಪುತ್ತೂರಿನಲ್ಲಿಯೇ ಬುದ್ದಿ ಮತ್ತು ಭಾವಕೋಶಗಳನ್ನು ತಿದ್ದಿಕೊಳ್ಳಲು ಹಲವು ಅವಕಾಶಗಳು ದೊರೆತವು. ಒಂದನೇ ತರಗತಿಯಲ್ಲಿದ್ದಾಗಲೇ ಕುದುರೆ ಸಾರೋಟಿನ ಚಿತ್ರವನ್ನು ಬಿಡಿಸಿ ಎಲ್ಲರ ಗಮನ ಸೆಳೆದಿದ್ದೆ. ಆಗ ಶಿಕ್ಷಕಿಯೊಬ್ಬರು ನೀಡಿದ ಪ್ರೋತ್ಸಾಹದಿಂದಲೇ ಪ್ರೌಢಶಾಲೆಯಲ್ಲಿಯೇ ಮರದಿಂದ ಶಿಲ್ಪಕೆತ್ತನೆ, ಸೋಪುಗಳಲ್ಲಿ ಗಣೇಶ, ಶಿವನ ಮೂರ್ತಿಗಳನ್ನು ಕೆತ್ತುವ ಹೊಸ ಬಗೆಯ ಕಲೆಯನ್ನು ರೂಢಿಸಿಕೊಂಡಿದ್ದೆ. ನನ್ನೊಳಗಿನ ಕಲಾವಿದನಿಗೆ ಸಹಪಾಠಿಗಳಿಂದ ಸಿಗುತ್ತಿದ್ದ ಪ್ರೋತ್ಸಾಹ ನೋಡಿ ಪೇಚಿಗೆ ಸಿಲುಕುತ್ತಿದ್ದೆ` ಎಂದು ನೆನಪಿಸಿಕೊಂಡರು.
`ಪಿಯುಸಿಯಲ್ಲಿದ್ದಾಗ ಬಿಡಿಸಿದ ಲಾಲ್‌ಬಹುದ್ದೂರ್ ಶಾಸ್ತ್ರಿ ಅವರ ಭಾವಚಿತ್ರ ಕಾಲೇಜಿನ ನಿಯತಕಾಲಿಕೆಯಲ್ಲಿ ಪ್ರಕಟಗೊಂಡಿತ್ತು. ಇದರಿಂದ ಕಲಾವಿದನಾದ ಹೆಮ್ಮೆಯಿತ್ತು. ಶಿವರಾಮ ಕಾರಂತರ ಮಕ್ಕಳಾದ ಉಲ್ಲಾಸ ಕಾರಂತ ಮತ್ತು ಕ್ಷಮಾ ಕಾರಂತರೊಂದಿಗೆ ಕ್ರಿಕೆಟ್ ಆಟವಾಡಲು ತೆರಳುತ್ತಿದ್ದೆ. ಒಂದು ದಿನ ನಾನು ಬಿಡಿಸಿದ ಚಿತ್ರಗಳನ್ನು ಕಾರಂತರು ನೋಡಿ, `ನೀನು ಮರದ ಚಿತ್ರ ಬಿಡಿಸಬೇಕೆಂದರೆ ಮರದ ಕೆಳಗೆ ನಿಂತು ಅದನ್ನು ಸೂಕ್ಷ್ಮವಾಗಿ ಗಮನಿಸು, ಆನಂತರವೇ ಚಿತ್ರ ಬಿಡಿಸು` ಎಂದು ನೀಡಿದ ಸಲಹೆ, ಕಲಾವಿದನೆಂಬ ಗರ್ವವನ್ನು ಕಡಿಮೆ ಮಾಡಿ, ನಾನೇನಾಗಬೇಕು ಎಂಬುದನ್ನು ಸೂಚ್ಯವಾಗಿ ತಿಳಿಸಿತು` ಎಂದು ತಿಳಿಸಿದರು.
`1967ರಲ್ಲಿ ಬೆಂಗಳೂರಿಗೆ ಆಗಮಿಸಿದ್ದೆ. `ಮಲ್ಲಿಗೆ` ಪತ್ರಿಕೆಯಲ್ಲಿ ಸ್ವಲ್ಪ ಕಾಲ ಚಿತ್ರಕಲಾವಿದನಾಗಿ ದುಡಿದು ನಂತರ `ಸುಧಾ` `ಪ್ರಜಾವಾಣಿ`ಯಲ್ಲಿ ಕಾರ್ಯನಿರ್ವಹಿಸಿದ್ದೆ. ಈ ಮಧ್ಯೆ ಗಾಂಧಿ ಬಜಾರಿನಲ್ಲಿದ್ದ ಹಡಪದ್ ಅವರ ಕಲಾಶಾಲೆಗೆ ಸೇರ್ಪಡೆಗೊಂಡು ಹೆಚ್ಚಿನ ವಿದ್ಯಾಭ್ಯಾಸ ಪಡೆದೆ. ಮುದ್ರಣ ಮಾಧ್ಯಮದಲ್ಲಿ ಆಗ ಇದ್ದ ಅಚ್ಚುಮೊಳೆ ಜೋಡಣೆ ತಂತ್ರಜ್ಞಾನಕ್ಕೆ ರೇಖೆಗಳನ್ನು ಹೇಗೆ ಹೊಂದಿಸಬೇಕು ಎಂಬುದರ ಬಗ್ಗೆ ಸ್ವಲ್ಪ ಗೊಂದಲವಿತ್ತು. ಎಪ್ಪತ್ತರ ದಶಕದ ಸಾಹಿತ್ಯ ಮತ್ತು ಕಲೆಯಲ್ಲಿ ಕ್ರಾಂತಿಕಾರಿ ಮನೋಭಾವ ಹೆಚ್ಚಾಗಿತ್ತು` ಎಂದು ಹೇಳಿದರು.
`ಕೆ.ಕೆ.ಹೆಬ್ಬಾರ್ ಅವರ ಸಹಾಯದಿಂದ ಟ್ಯಾಗೋರ್ ಅವರ ಶಾಂತಿನಿಕೇತನ ಶಾಲೆಗೆ ಹೋಗಿದ್ದರಿಂದ ಅಂತರರಾಷ್ಟ್ರೀಯ ಕಲಾವಿದರೊಂದಿಗೆ ಸಂವಾದ ನಡೆಸುವ ಅವಕಾಶ ದೊರೆಯಿತು. ಕಲಾವಿದನಿಗೆ ಇರಬೇಕಾದ ಕೌಶಲಗಳನ್ನು ಅಲ್ಲಿ ಕಲಿತುಕೊಂಡೆ. ಕೇವಲ ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಕಲಾ ತರಗತಿಗಳಿಂತ ಪರಸ್ಪರ ಚರ್ಚೆ ಹಾಗೂ ಚಿಂತನೆಗಳನ್ನು ಹಂಚಿಕೊಳ್ಳುವ ಮೂಲಕ ಕಲಾವಿದ ಹೊಸತನ್ನು ಸೃಷ್ಟಿಸಲು ಸಾಧ್ಯವಿದೆ` ಎಂದು ತಿಳಿಸಿದರು.
Tag: K. Chandranatha Acharya

ಕಾಮೆಂಟ್‌ಗಳು